ಆಫ್ಘಾನಿಸ್ತಾನದ ಪಕ್ವಿಕಾ ವಲಯದ ಮೇಲೆ ಪಾಕಿಸ್ತಾನದ ದಿಢೀರನೆ ಸರಣಿ ವಾಯುದಾಳಿ ನಡೆಸಿದ್ದು, ಕನಿಷ್ಠ 15 ಮಂದಿ ಅಸುನೀಗಿದ್ದಾರೆ.
ಡಿಸೆಂಬರ್ 24ರಂದು ರಾತ್ರಿ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಸುಮಾರು 7 ಗ್ರಾಮಗಳನ್ನು ಕೇಂದ್ರೀಕರಿಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದ್ದು, ಲಮನ್ ಗ್ರಾಮದ ಒಂದು ಕುಟುಂಬ ಇಡೀ ಬಾಂಬ್ ದಾಳಿಗೆ ಬಲಿಯಾಗಿದೆ ಎಂದು ಹೇಳಲಾಗಿದೆ.
ಪಾಕಿಸ್ತಾನ ದಿಢೀರನೆ ದಾಳಿ ನಡೆಸಿರುವುದಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ದಾಳಿಯಲ್ಲಿ 7 ನಾಗರಿಕರು ಗಾಯಗೊಂಡಿದ್ದು, ದಾಳಿ ನಡೆದ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.