Sunday, November 9, 2025
Google search engine
Homeಅಪರಾಧ7ನೇ ಮದುವೆ ಆಗುವಾಗ ಸಿಕ್ಕಿಬಿದ್ದ ಚಾಲಕಿ ಮಹಿಳೆಯರ ಗ್ಯಾಂಗ್!

7ನೇ ಮದುವೆ ಆಗುವಾಗ ಸಿಕ್ಕಿಬಿದ್ದ ಚಾಲಕಿ ಮಹಿಳೆಯರ ಗ್ಯಾಂಗ್!

ಮದುವೆ ಆಗುವ ನೆಪದಲ್ಲಿ ದೋಚಿ ಪರಾರಿಯಾಗುವ ಮಹಿಳೆಯರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಇದೀಗ ೬ ಮದುವೆ ಆಗಿ ವಂಚಿಸಿದ್ದ ಇಬ್ಬರು ಮಹಿಳೆಯ ಗ್ಯಾಂಗ್ 7ನೇ ಮದುವೆ ಪ್ರಯತ್ನದಲ್ಲಿ ಸಿಕ್ಕಿಬಿದ್ದಿದ್ದಾರೆ.

ಹೌದು, ಈ ಘಟನೆ ಉತ್ತರ ಪ್ರದೇಶದ ಬಾಂದಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರನ್ನು ಬಂಧಿಸಲಾಗಿದೆ.

ವಧು ಎಂದು ಬಿಂಬಿಸಿಕೊಳ್ಳುತ್ತಿದ್ದ ಬಿಂದು ಹಾಗೂ ಆಕೆಯ ತಾಯಿಯಂತೆ ತೋರಿಸಿಕೊಳ್ಳುತ್ತಿದ್ದ ಮತ್ತೊಬ್ಬ ಮಹಿಳೆ ಸಂಜನಾ ಗುಪ್ತ ಅಲ್ಲದೇ ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಸರಳವಾಗಿ ಕೋರ್ಟ್ ನಲ್ಲಿ ಮದುವೆ ಆಗುವಂತೆ ಒತ್ತಾಯಿಸಿ ಕಾನೂನು ಬಲ ಪಡೆಯುವ ಈ ಗ್ಯಾಂಗ್ ನಂತರ ಗಂಡನ ಮನೆಯೊಳಗೆ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದರು. ಸಮಯ ನೋಡಿ ಮದುವೆ ಆದ ಯುವತಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಓಡಿ ಬರುತ್ತಿದ್ದಳು.

ಈ ರೀತಿ ನಾಲ್ವರು 6 ಮಂದಿಯನ್ನು ಮದುವೆ ಆಗಿ ಲಕ್ಷಾಂತರ ರೂಪಾಯಿ ದೋಚಿದ್ದರು. ಆದರೆ 7ನೇ ಮದುವೆ ಪ್ರಯತ್ನದಲ್ಲಿದ್ದಾಗ ಗಾಳ ಹಾಕಿದ್ದ ವರನ ಮೂಲಕ ಸಿಕ್ಕಿಬಿದ್ದಿದ್ದಾರೆ.

ಉಪಾಧ್ಯಾಯ ಎಂಬುವವರನ್ನು ಪರಿಚಯ ಮಾಡಿಕೊಂಡ ವಿಮಲೇಶ್ 1.5 ಲಕ್ಷ ರೂ. ನೀಡಿದರೆ ಮದುವೆಗೆ ಹುಡುಗಿ ತೋರಿಸಿ ಒಪ್ಪಿಸುವುದಾಗಿ ಹೇಳಿದ. ಬಿಂದು ಎಂಬಾಕೆಯನ್ನು ಪರಿಚಯಿಸಿ ಸರಳ ಮದುವೆಗೆ ಪ್ರಚೋದಿಸಿದ.

ಇವರ ವರ್ತನೆ ಹಾಗೂ ಹಣದ ಬೇಡಿಕೆಯಿಂದ ಅನುಮಾನಗೊಂಡ ಉಪಾಧ್ಯಾಯ, ಯುವತಿ ಹಾಗೂ ಯುವತಿಯ ತಾಯಿಯ ಆಧಾರ್ ಕಾರ್ಡ್ ತೋರಿಸುವಂತೆ ಕೇಳಿದ್ದಾನೆ. ಆಗ ಅವರು ತೋರಿಸಲು ಹಿಂಜರಿದಾಗ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಾಲ್ವರು ಸಾಧ್ಯವಾದಷ್ಟು ಏಕಾಂಗಿಯಾಗಿ ಇರುವ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳ ಹಾಕುತ್ತಿದ್ದರು. ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಪೊಲೀಸರು ಅಲರ್ಟ್ ಆಗಿರುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಶಿವರಾಜ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments