Thursday, May 14, 2026
Google search engine
Homeಬೆಂಗಳೂರುಮುದ್ದುಲಕ್ಷ್ಮೀ ಧಾರವಾಹಿಯ ಕಿರುತೆರೆ ನಟ ಬೆಂಗಳೂರಿನಲ್ಲಿ ಅರೆಸ್ಟ್!

ಮುದ್ದುಲಕ್ಷ್ಮೀ ಧಾರವಾಹಿಯ ಕಿರುತೆರೆ ನಟ ಬೆಂಗಳೂರಿನಲ್ಲಿ ಅರೆಸ್ಟ್!

ಗೆಳತಿಯ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಕೊಲೆ ಬೆದರಿಕೆ ಆರೋಪದಡಿ ಕನ್ನಡ ಹಾಗೂ ತೆಲುಗು ಕಿರುತೆರೆ ನಟ ಚರಿತ್ ಬಾಳಪ್ಪ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಕನ್ನಡದ ಮುದ್ದುಲಕ್ಷ್ಮಿ, ಲವಲವಿಕೆ, ಸರ್ಪ ಸಂಬಂಧ ಸೇರಿದಂತೆ ತೆಲುಗಿನ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ಚರಿತ್ ಬಾಳಪ್ಪ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಗೆಳತಿ ಜೊತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು ಅಲ್ಲದೇ ಯುವತಿ ವಾಸ ಮಾಡುತ್ತಿದ್ದ ಮನೆಗೆ ನುಗ್ಗಿ ಸಹಚರರ ಜೊತೆ ಕಿರುಕುಳ ನೀಡಿದ್ದಾರೆ. ಹಣಕ್ಕೆ ಬೇಡಿಕೆಯಿಟ್ಟಿದ್ದು, ಆಕೆಯ ಖಾಸಗಿ ಫೋಟೋ, ವೀಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಚರಿತ್ ಹಾಗೂ ಪತ್ನಿ ಮಂಜುಶ್ರೀ ಡಿವೋರ್ಸ್ ಪಡೆದಿದ್ದು, ಕೋರ್ಟ್ ಆದೇಶದಂತೆ ಡಿವೋರ್ಸ್ ಪರಿಹಾರ ಹಣಕ್ಕೆ ನೋಟಿಸ್ ಕಳಿಸಿದ್ದಕ್ಕೆ ಪತ್ನಿಗೆ ಕೂಡ ಬೆದರಿಕೆ ಹಾಕಿದ್ದಾರೆಂದು ಪತ್ನಿ ಮಂಜುಶ್ರೀ ದೂರು ನೀಡಿದ್ದರು.

ಇದಕ್ಕೆ ಸಂಬಂಧಿಸಿದಂತೆ ಕಳೆದ ಜೂನ್ ತಿಂಗಳಲ್ಲಿ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಎರಡು ಪ್ರಕರಣಗಳಲ್ಲಿ ಚರಿತ್ ಬಾಳಪ್ಪನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments