Home ಬೆಂಗಳೂರು ಚಿನ್ನಾಭರಣ ವಂಚಿಸಿದ ಐಶ್ವರ್ಯಾ ಗೌಡ ವಿರುದ್ಧ ಡಿಕೆ ಸುರೇಶ್ ಪೊಲೀಸ್ ಆಯುಕ್ತರಿಗೆ ದೂರು

ಚಿನ್ನಾಭರಣ ವಂಚಿಸಿದ ಐಶ್ವರ್ಯಾ ಗೌಡ ವಿರುದ್ಧ ಡಿಕೆ ಸುರೇಶ್ ಪೊಲೀಸ್ ಆಯುಕ್ತರಿಗೆ ದೂರು

ಡಿಕೆ ಸುರೇಶ್ ಪೊಲೀಸ್ ಆಯುಕ್ತರಿಗೆ ಭಾನುವಾರ ಪತ್ರ ಬರೆದು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

by Editor
0 comments
dk suresh

ತಮ್ಮ ಹೆಸರು ದುರುಪಯೋಗ ಮಾಡಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡುತ್ತಿರುವ ಐಶ್ವರ್ಯಾ ಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಂಸದ ಡಿಕೆ ಸುರೇಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಡಿಕೆ ಸುರೇಶ್ ಪೊಲೀಸ್ ಆಯುಕ್ತರಿಗೆ ಭಾನುವಾರ ಪತ್ರ ಬರೆದು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಐಶ್ವರ್ಯಾ ಗೌಡ ಉರುಫ್ ನವ್ಯಶ್ರೀ ಎಂಬುವವರು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡು ಹಲವಾರು ಜನರಿಗೆ ಚಿನ್ನಾಭರಣ ಹಾಗೂ ಹಣ ವಂಚನೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿವೆ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ.

ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ನನ್ನ ಹೆಸರು ಬಳಸಿಕೊಂಡು ವಂಚನೆ ನಡೆಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಇಂತಹ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ದೂರು ಪತ್ರದಲ್ಲಿ ಸುರೇಶ್ ಮನವಿ ಮಾಡಿದ್ದಾರೆ.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
Police News: 10 ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ 16 ವರ್ಷದ ಬಾಲಕ! ನಿವೃತ್ತಿ ನಿರ್ಧಾರ ಮಾಡಿಲ್ಲ, ಪಂದ್ಯದಿಂದ ಅಷ್ಟೇ: ರೋಹಿತ್ ಶರ್ಮಾ ಬಿಸಿಸಿಐಗೆ ಕಾರ್‍ಯದರ್ಶಿಯಾಗಿ ಜೈ ಶಾ ಸ್ಥಾನಕ್ಕೆ ಸೈಕಿಯಾ ಆಯ್ಕೆ? ಡಿಎಂಕೆ ಸಂಸದ ಕತಿರ್ ಆನಂದ್ ದಾಳಿ: ತಮಿಳುನಾಡಿನಲ್ಲಿ ಇಡಿ ಸರಣಿ ದಾಳಿ! ಕಂದಕಕ್ಕೆ ಬಿದ್ದ ಸೇನಾ ವಾಹನ: 4 ಯೋಧರ ದುರ್ಮರಣ ಕೇಂದ್ರ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಿಬಿಐ FIR ದಾಖಲಿಸಲು ರಾಜ್ಯ ಸರ್ಕಾರದ ಅನುಮತಿ ಅನಗತ್ಯ: ಸುಪ್ರೀಂಕೋರ್ಟ್ ನಟ ದರ್ಶನ್ ಬೆನ್ನುನೋವಿನ ಶಸ್ತ್ರಚಿಕಿತ್ಸೆಗೆ ಮುಹೂರ್ತ ಫಿಕ್ಸ್: ವೈದ್ಯ ಅಜಯ್ ಹೆಗ್ಡೆ ಮಾಹಿತಿ ದೆಹಲಿ ಚುನಾವಣೆ ಬಿಜೆಪಿ ಪಟ್ಟಿ ಪ್ರಕಟ: ಕೇಜ್ರಿವಾಲ್​ ವಿರುದ್ಧ ಪರವೇಶ್ ಕಣಕ್ಕೆ ಸ್ಮೈಲಿಂಗ್ ಬುದ್ದ ಖ್ಯಾತಿಯ ಹಿರಿಯ ಅಣು ವಿಜ್ಞಾನಿ ಆರ್.ಚಿದಂಬರಂ ಇನ್ನಿಲ್ಲ ಸೇನಾ ವಾಹನ ಕಮರಿಗೆ ಬಿದ್ದು ಇಬ್ಬರು ಯೋಧರ ದುರ್ಮರಣ, ಇಬ್ಬರಿಗೆ ಗಾಯ