ದೇಶಾದ್ಯಂತ ವಾಹನ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಮಾರ್ಚ್ ನಿಂದ ಆರಂಭಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಸ್ತುತ ಅಪಘಾತಕ್ಕೊಳಗಾದ ವ್ಯಕ್ತಿಗೆ ಗರಿಷ್ಠ 1.5 ಲಕ್ಷ ರೂ. ದೊರೆಯುತ್ತಿದೆ. ಖಾಸಗಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿದ್ದು, ಪೊಲೀಸರು, ವೈದ್ಯರು ಹಾಗೂ ಸರ್ಕಾರಿ ಸಂಘಟನೆಗಳ ಸಹಯೋಗದೊಂದಿಗೆ ಅಪಘಾತಕ್ಕೊಳಗಾದವರ ಸಂಪೂರ್ಣ ವೆಚ್ಚ ಭರಿಸುವ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದರು.
ಐಟಿ ಕಂಪನಿ ಸಹಯೋಗದಲ್ಲಿ ಇ-ಡಿಲಿಟೆಡ್ ಆಕ್ಸಿಡೆಂಟ್ ರಿಪೋರ್ಟ್ (ಇ-ಡರ್) ಅರ್ಜಿ ನೀಡಲಾಗುವುದು. ದೇಶಾದ್ಯಂತ ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೊಳಗಾದವರೆ 7 ದಿನಗಳ ಒಳಗಾಗಿ ಅರ್ಜಿ ಭರ್ತಿ ಮಾಡಿದರೆ ಪೂರ್ಣ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ನಿತಿನ್ ಗಡ್ಕರಿ ವಿವರಿಸಿದರು.
2024 ಮಾರ್ಚ್ ರಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಿದ್ದು, ಮುಂದಿನ ಮಾರ್ಚ್ ತಿಂಗಳಿಂದ ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಅವರು ಘೋಷಿಸಿದರು.