Sunday, November 9, 2025
Google search engine
Homeವಿದೇಶಲಾಜ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿಗೆ 5 ಮಂದಿ ಬಲಿ: ಊರು ಬಿಟ್ಟ 1,00,00 ಜನ!

ಲಾಜ್ ಏಂಜಲೀಸ್ ನಲ್ಲಿ ಕಾಡ್ಗಿಚ್ಚಿಗೆ 5 ಮಂದಿ ಬಲಿ: ಊರು ಬಿಟ್ಟ 1,00,00 ಜನ!

ಅಮೆರಿಕದ ಲಾಸ್ ಏಂಜಲೀಸ್ ಕಡಲತೀರದಲ್ಲಿ ರಾತ್ರೋರಾತ್ರಿ ಕಾಣಿಸಿಕೊಂಡ ಕಾಡ್ಗಿಚ್ಚಿಗೆ ೫ಮಂದಿ ಬಲಿಯಾಗಿದ್ದು, 1 ಲಕ್ಷಕ್ಕೂ ಅಧಿಕ ಜನರು ನಗರವನ್ನು ತೊರೆದಿದ್ದಾರೆ.

ಮಂಗಳವಾರ ರಾತ್ರಿ ಕಾಣಿಸಿಕೊಂಡ ಕಾಡ್ಗಿಚ್ಚು ಬುಧವಾರ ಬೆಳಿಗ್ಗೆ ಆಗುತ್ತಿದ್ದಂತೆ ಬಿಸಿಲು ಹೆಚ್ಚಾದಂತೆ ಮತ್ತಷ್ಟು ದಟ್ಟವಾಗಿ ವ್ಯಾಪಿಸಿದೆ. ಕಾಡ್ಗಿಚ್ಚಿನಿಂದ ದಟ್ಟ ಹೊಗೆ ಆವರಿಸಿಕೊಂಡಿದ್ದು ಆಕಾಶಕ್ಕೆ ಚಾಚಿಕೊಂಡಿದೆ.

ಕಾಡ್ಗಿಚ್ಚಿನಿಂದ ತಪ್ಪಿಸಿಕೊಳ್ಳಲು ಹಾಲಿವುಡ್ ಸ್ಟಾರ್ ಗಳು ಸೇರಿದಂತೆ ಸಾವಿರಾರು ಜನರು ತಮ್ಮ ಕಾರುಗಳಲ್ಲಿ ಹಾಗೂ ನಡೆದುಕೊಂಡು ಕಾಡ್ಗಿಚ್ಚಿನಿಂದ ಪಾರಾಗಲು ಯತ್ನಿಸಿದ್ದಾರೆ.

ಹಾಲಿವುಡ್ ಐತಿಹಾಸಿಕ ಥಿಯೇಟರ್ ಡೊಲ್ಬೆ ಥಿಯೇಟರ್, ಪ್ರತಿವರ್ಷ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ಸಭಾಂಗಣ ಮುಂತಾದವು ಬೆಂಕಿಯ ಕೆನ್ನಾಲಿಗೆ ಸಿಲುಕುವ ಭೀತಿಯಲ್ಲಿದೆ.
ಸಾಂತಾ ಮೊನಿಕಾ ಮತ್ತು ಮಲಿಡು ಕಡಲ ತೀರದಲ್ಲಿನ ಕಾಡ್ಗಿಚ್ಚಿನಿಂದ 3000 ಎಕರೆ ವಿಸ್ತೀರ್ಣದ ಕಾಡು ನಾಶವಾಗಿದೆ. ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಕಾರುಗಳಿಗೆ ಹಾನಿಯಾಗಿದೆ.

ಭಾರೀ ಸಂಖ್ಯೆಯಲ್ಲಿ ಜನರು ಸುರಕ್ಷಿತ ಪ್ರದೇಶಗಳಲ್ಲಿ ದೌಡಾಯಿಸಿದ್ದರಿಂದ ರಸ್ತೆ ದಟ್ಟಣೆ ಉಂಟಾಗಿದ್ದು, ವಾಹನಗಳು ಕಾಡ್ಗಿಚ್ಚಿನಿಂದ ಹಾನಿ ಆಗಿರುವ ಪ್ರಕರಣಗಳು ಕೂಡ ವರದಿಯಾಗಿದೆ.

ಕಾಡ್ಗಿಚ್ಚು ನಂದಿಸಲು ಸರ್ಕಾರ ಹರಸಾಹಸಪಡುತ್ತಿದ್ದು, ನಿವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ವಾಪಸ್ ಕರೆಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments