ಅಮೆರಿಕದ ಲಾಸ್ ಏಂಜಲೀಸ್ ಕಡಲತೀರದಲ್ಲಿ ರಾತ್ರೋರಾತ್ರಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ತಪ್ಪಿಸಿಕೊಳ್ಳಲು ಹಾಲಿವುಡ್ ಸ್ಟಾರ್ ನಟರು ಸೇರಿದಂತೆ 30 ಸಾವಿರ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಹಾಲಿವುಡ್ ಸ್ಟಾರ್ ಗಳು ಸೇರಿದಂತೆ ಸಾವಿರಾರು ಜನರು ತಮ್ಮ ಕಾರುಗಳಲ್ಲಿ ಹಾಗೂ ನಡೆದುಕೊಂಡು ಕಾಡ್ಗಿಚ್ಚಿನಿಂದ ಪಾರಾಗಲು ಯತ್ನಿಸಿದ್ದಾರೆ.
ಮಂಗಳವಾರ ರಾತ್ರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಜನರು ಪರಾರಿಯಾಗಲು ದಿಕ್ಕಾಪಾಲಾಗಿ ಸುರಕ್ಷಿತ ಸ್ಥಳಗಳಿಗೆ ದೌಡಾಯಿಸಿದ್ದಾರೆ.
ಸಾಂತಾ ಮೊನಿಕಾ ಮತ್ತು ಮಲಿಡು ಕಡಲ ತೀರದಲ್ಲಿನ ಕಾಡ್ಗಿಚ್ಚಿನಿಂದ 3000 ಎಕರೆ ವಿಸ್ತೀರ್ಣದ ಕಾಡು ನಾಶವಾಗಿದೆ. ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಕಾರುಗಳಿಗೆ ಹಾನಿಯಾಗಿದೆ.
ಭಾರೀ ಸಂಖ್ಯೆಯಲ್ಲಿ ಜನರು ಸುರಕ್ಷಿತ ಪ್ರದೇಶಗಳಲ್ಲಿ ದೌಡಾಯಿಸಿದ್ದರಿಂದ ರಸ್ತೆ ದಟ್ಟಣೆ ಉಂಟಾಗಿದ್ದು, ವಾಹನಗಳು ಕಾಡ್ಗಿಚ್ಚಿನಿಂದ ಹಾನಿ ಆಗಿರುವ ಪ್ರಕರಣಗಳು ಕೂಡ ವರದಿಯಾಗಿದೆ.