ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೊಡ್ರಿಗಸ್ ಚೊಚ್ಚಲ ಶತಕದ ಬಲದಿಂದ ಭಾರತ 116 ರನ್ ಗಳ ಭಾರೀ ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿ 3 ಪಂದ್ಯಗಳ ಸರಣಿಯನ್ನು 2-0ರಿಂದ ವಶಪಡಿಸಿಕೊಂಡಿದೆ.
ರಾಜ್ ಕೋಟ್ ನಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂದಾನ (73), ಪ್ರತಿಕಾ ರಾವಲ್ (67) ಮತ್ತು ಹರ್ಲೀನ್ ಡಿಯೋಲ್ (89) ಅರ್ಧಶತಕಗಳ ನೆರವಿನಿಂದ ಭಾರತ 5 ವಿಕೆಟ್ ನಷ್ಟಕ್ಕೆ 370 ರನ್ ಗಳಿಸಿತು.
ಬಳಕ ಭಾರತದ ಬೌಲರುಗಳು ಐರ್ಲೆಂಡ್ ತಂಡವನ್ನು ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 245 ರನ್ ಗಳಿಗೆ ನಿಯಂತ್ರಿಸಿ ಜಯದ ಕೇಕೆ ಹಾಕಿದರು.
ಐರ್ಲೆಂಡ್ ಸ್ಥಿರವಾಗಿ ಬ್ಯಾಟಿಂಗ್ ಮಾಡಿತಾದರೂ ಭಾರತದ ಬೃಹತ್ ಮೊತ್ತವನ್ನು ಮೀರಿಸುವ ತೋಳ್ಬಲ ಹೊಂದಿರಲಿಲ್ಲ. ಕ್ರಿಸ್ಟಿನಾ ಕೌಲ್ಟರ್ ರೀಲಿ ಅವರ 80 ರನ್ ಹೊರತುಪಡಿಸಿ, ಇತರ ಬ್ಯಾಟರ್‌ಗಳಿಂದ ಹೆಚ್ಚಿನ ಹೋರಾಟ ಬರಲಿಲ್ಲ. ಭಾರತದ ಪರಸ್ಪಿನ್ನರ್ ದೀಪ್ತಿ ಶರ್ಮಾ 37 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಪ್ರಿಯಾ ಮಿಶ್ರಾ 2 ವಿಕೆಟ್ ಪಡೆದು ಮಿಂಚಿದರು.
ಜೆಮಿಮಾ ಚೊಚ್ಚಲ ಶತಕದಾಟ
ಜೆಮಿಮಾ ರೋಡ್ರಿಗಸ್ ಅವರ ಮೊದಲ ಶತಕ ಮತ್ತು ನಾಯಕಿ ಸ್ಮೃತಿ ಮಂಧಾನ, ಪ್ರತೀಕ್ ರಾವ್ಲಾ ಮತ್ತು ಹರ್ಲೀನ್ ಡಿಯೋಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ಮಹಿಳಾ ತಂಡವು ಏಕದಿನ ಕ್ರಿಕೆಟ್‌ನಲ್ಲಿ ತನ್ನ ಗರಿಷ್ಠ ಸ್ಕೋರ್ ಕಲೆ ಹಾಕಿತು.
ಭಾರತದ ವನಿತೆಯರು ಐರ್ಲೆಂಡ್‌ನ ಬೌಲರ್‌ಗಳಿಗೆ ಬೆವರಿಳಿಸಿ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 370 ರನ್ ಗಳಿಸಿದರು. ಆರಂಭಿಕ ಬ್ಯಾಟರ್‌ಗಳಾದ ಸ್ಮೃತಿ ಮಂದಾನ ಮತ್ತು ಪ್ರತೀಕಾ ರಾವಲ್ ಜೋಡಿ 19 ಓವರ್‌ಗಳಲ್ಲಿ 154 ರನ್‌ಗಳ ಜೊತೆಯಾಟದಿಂದ ತಂಡವನ್ನು ಮುನ್ನಡೆಸಿದರು.
ಸ್ಮೃತಿ ಮಂಧಾನ 73 ರನ್ ಮತ್ತು ಪ್ರತೀಕಾ ರವಲ್ 67 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಹರ್ಲೀನ್ ಡಿಯೋಲ್ 89 ರನ್‌ಗಳ ಕೊಡುಗೆ ನೀಡಿದರು.
ಮತ್ತೊಂದೆಡೆ ಅದ್ಭುತ ಇನ್ನಿಂಗ್ಸ್ ಆಡಿದ ಜೆಮಿಯಾ ರೋಡ್ರಿಗಸ್ ಅವರ ಅಂತಾರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿ ಸಂಭ್ರಮಿಸಿದರು. ಜೆಮಿಯಾ 91 ಎಸೆತಗಳಲ್ಲಿ 12 ಬೌಂಡರಿಗಳ ಸಹಾಯದಿಂದ 102 ರನ್ ಗಳಿಸಿದರು.
ಕೌರ್ ದಾಖಲೆ ಸರಿಗಟ್ಟಿದ ಜೆಮಿಮಾ
ಐಲೆಂರ್ಡ್ ವಿರುದ್ಧ ಅಬ್ಬರಿಸಿದ ಜೆಮಿಮಾ ರೋಡ್ರಿಗಸ್ ಅವರು ಹರ್ಮನ್‌ಪ್ರೀತ್ ಕೌರ್ ಅವರ ದಾಖಲೆಯನ್ನು ಸರಿಗಟ್ಟಿದರು. ಮಹಿಳಾ ಏಕಿದನ ಕ್ರಿಕೆಟ್‌ನಲ್ಲಿ ಕೇವಲ 40 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಪೂರೈಸಿದರು.
ಜೆಮಿಮಾ 90 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸುವ ಮೂಲಕ ಏಕದಿನ ಕ್ರಿಕೆಟ್ ಜಂಟಿ ಎರಡನೇ ವೇಗದ ಶತಕ ಬಾರಿಸಿದ ಆಟಗಾರ್ತಿ ಎನಿಸಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧ 2024ರಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು 89 ಎಸೆತಗಳಲ್ಲಿ ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇದಕ್ಕೂ ಮುನ್ನ 90 ಎಸೆತಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 2017ರಲ್ಲಿ ಕೌರ್ ಶತಕವನ್ನು ಬಾರಿಸಿದ್ದರು.