Home ಕ್ರೀಡೆ ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ: ಬೆಂಗಳೂರು ಎನ್ ಸಿಎಗೆ ಮೊರೆ

ಚಾಂಪಿಯನ್ಸ್ ಟ್ರೋಫಿಗೆ ಬುಮ್ರಾ ಅನುಮಾನ: ಬೆಂಗಳೂರು ಎನ್ ಸಿಎಗೆ ಮೊರೆ

ಮುಂಬೈ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ಜಸ್ಪ್ರೀತ್ ಬುಮ್ರಾ ಅವರು ಮಹತ್ವದ ಐಸಿಸಿ ಚಾಂಪಿಯನ್ ಟ್ರೋಫಿಯಿಂದ ಹೊರಗುಳಿಯುವ ಸಾಧ್ಯತೆಗಳು ಗೋಚರಿಸಿವೆ.

by Editor
0 comments

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ಜಸ್ಪ್ರೀತ್ ಬುಮ್ರಾ ಅವರು ಮಹತ್ವದ ಐಸಿಸಿ ಚಾಂಪಿಯನ್ ಟ್ರೋಫಿಯಿಂದ ಹೊರಗುಳಿಯುವ ಸಾಧ್ಯತೆಗಳು ಗೋಚರಿಸಿವೆ.

ಬುಮ್ರಾ ಅವರ ಬೆನ್ನುನೋವಿನ ಗಾಯ ಗಂಭೀರವಾಗಿದ್ದೆ. ಅವರ ಬೆನ್ನಿನಲ್ಲಿ ಬಾವು ಇದೆ ಚಿಕಿತ್ಸೆಯೊಂದಿಗೆ ಪ್ರಸ್ತುತ ಅವರಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕಟ್ ಅಕಾಡೆಮಿಯಲ್ಲಿ ತೆರಳಲು ಸೂಚಿಸಲಾಗಿದೆ.

ಎನ್‌ಸಿಎನಲ್ಲಿ ಬುಮ್ರಾ ಅವರಿಗೆ ಚಿಕಿತ್ಸೆ ಮತ್ತು ಚೇತರಿಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಂಗ್ಲೆಂಡ್ ವಿರುದ್ಧ ಟಿ೨೦ ಸರಣಿಗೆ ತಂಡವನ್ನು ಆಯ್ಕೆ ಮಾಡಿದ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

banner

“ಬುಮ್ರಾ ಅವರು ಪುನಶ್ಚೇತನಕ್ಕಾಗಿ ಎನ್‌ಸಿಎ ಗೆ ತೆರಳಲಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಅವರ ಬೆನ್ನಿನಲ್ಲಿ ಯಾವುದೇ ಫ್ರ್ಯಾಕ್ಚರ್ ಆಗಿಲ್ಲ, ಆದರೆ ಊತ ಇದೆ.

ಹೀಗಾಗಿ ಸುಮಾರು ೩ ವಾರ ಎನ್‌ಸಿಎನಲ್ಲಿ ಅವರಿಗೆ ಚಿಕಿತ್ಸೆ ಮತ್ತು ಚೇತರಿಕೆಗೆ ವ್ಯವಸ್ಥೆ ಮಾಡಲಾಗುವುದು. ಆ ಬಳಿಕ ಒಂದೆರಡು ಪಂದ್ಯಗಳಲ್ಲಿ ಅವರನ್ನು ಆಡಿಸಿ ಅವರ ದೈಹಿಕ ಕ್ಷಮತೆಯನ್ನು ಪರೀಕ್ಷಿಸಲಾಗುವುದು” ಎಂದು ತಿಳಿಸಿದ್ದಾರೆ.

ಐಸಿಸಿ ಚಾಂಪಿಯನ್ ಟ್ರೋಫಿಗೆ ತಂಡಗಳನ್ನು ಪ್ರಕಟಿಸಲು ಐಸಿಸಿಯು ಜನವರಿ ೧೨ರವರೆಗೆ ಗಡುವು ನೀಡಿತ್ತು. ಆದರೆ ಬಿಸಿಸಿಐಯು ಈ ಗಡುವನ್ನು ಕೆಲ ದಿನಗಳವರೆಗೆ ವಿಸ್ತರಿಸುವಂತೆ ಐಸಿಸಿಗೆ ಮನವಿ ಮಾಡಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲಿರುವ 15 ಮಂದಿಯ ಭಾರತ ತಂಡದಲ್ಲಿ ಬುಮ್ರಾ ಅವರ ಹೆಸರನ್ನು ಸೇರಿಸಬೇಕೋ ಅಥವಾ ಮೀಸಲು ಆಟಗಾರರ ಪಟ್ಟಿಯಲ್ಲಿ ಸೇರಿಸಬೇಕೋ ಬೇಡವೋ ಎಂಬ ಬಗ್ಗೆ ಇನ್ನೂ ಗೊಂದಲವಿದೆ.

ಹೀಗಾಗಿ ಇದೀಗ ಬಿಸಿಸಿಐಯು ಭಾರತ ತಂಡದ ತಾತ್ಕಾಲಿಕ ಪಟ್ಟಿಯನ್ನು ಐಸಿಸಿಗೆ ಒಪ್ಪಿಸಲಿದೆ. ಫೆಬ್ರವರಿ ೧೨ರವರೆಗೂ ಆ ಪಟ್ಟಿಯಲ್ಲಿ ಬದಲಾವಣೆ ಮಾಡಲು ಬಿಸಿಸಿಐಗೆ ಅವಕಾಶ ಇದೆ. ಹೀಗಾಗಿ ಬುಮ್ರಾ ಅಷ್ಟರೊಳಗೆ ಫಿಟ್ ಆದಲ್ಲಿ ಅವರು ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬಿಸಿಸಿಐನಿಂದ ಮೇಜರ್ ಸರ್ಜರಿ: ಆಟಕ್ಕೆ ತಕ್ಕಂತೆ ಆದಾಯ, ಸಂಗಾತಿ ಪ್ರವೇಶ ನಿರ್ಬಂಧ! 15 ದಿನಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ನವೀಕರಣಕ್ಕೆ ಆರ್ ಬಿಐ ತಾಕಿತು! ಸಾಮೂಹಿಕ ಅತ್ಯಾಚಾರ ಎಸಗಿದ ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ವಿರುದ್ಧ ಎಫ್ ಐಆರ್ ದಾಖಲು! ಬಿಆರ್‌ಎಸ್ ನಾಯಕ ರಾಮರಾವ್, ಹರೀಶ್‌ಗೆ ಗೃಹಬಂಧನ ಇಸ್ರೇಲ್-ಹಮಾಸ್ ಕದನ ವಿರಾಮ ಸಾಧ್ಯತೆ: ಮಧ್ಯಪ್ರಾಚ್ಯದಲ್ಲಿ ಶಾಂತಿ ವಾಪಸ್ 3ನೇ ತಲೆಮಾರಿನ ನಾಗ್ ಕ್ಷಿಪಣಿ ಮೊದಲ ಪ್ರಯೋಗ ಯಶಸ್ವಿ! ಖೋಖೋ ವಿಶ್ವಕಪ್: ಬ್ರೆಜಿಲ್ ಮಣಿಸಿದ ಭಾರತ ಪುರುಷರ ತಂಡ ನಾಕೌಟ್ ಸನಿಹ ಖೋ-ಖೋ ವಿಶ್ವಕಪ್‌ 2025: ದಕ್ಷಿಣ ಕೊರಿಯಾ ವಿರುದ್ಧ ಗೆದ್ದು ಇತಿಹಾಸ ಬರೆದ ಭಾರತ ಮಹಿಳಾ ತಂಡ ರಣಜಿ ಟ್ರೋಫಿ ದೆಹಲಿ ಸಂಭಾವ್ಯ ತಂಡದಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ! ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿ ಪ್ರಕಟ!