ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲು ಅವರ ಮನೆಗೆ ಪಿಸ್ತೂಲು ತಗೊಂಡು ಹೋಗಿದ್ದೆ ಎಂದು ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಆಘಾತಕಾರಿ ಹೇಳಿದ್ದಾರೆ.
ಸಾಮ್ ದೀಶ್ ಭಾಟಿಯಾಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಹೇಳಿರುವ ಯೋಗರಾಜ್ ಸಿಂಗ್, ನನ್ನನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡಿದ್ದು, ಕಪಿಲ್ ದೇವ್ ಅವರ ಮನೆಗೆ ಹೋಗಿ ಅವರ ಹಣೆಗೆ ಗುಂಡಿಟ್ಟು ಕೊಲ್ಲಲು ತೆರಳಿದ್ದೆ ಎಂದಿದ್ದಾರೆ.
ಹರಿಯಾಣ ಹಾಗೂ ಉತ್ತರ ವಲಯ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಭಾರತ ತಂಡದ ನಾಯಕರೂ ಆಗಿದ್ದರು. ಆದರೆ ಯಾವುದೇ ಕಾರಣ ಇಲ್ಲದೇ ಅವರು ನನ್ನನ್ನು ತಂಡದಿಂದ ಕೈಬಿಟ್ಟಿದ್ದರಿಂದ ಅಸಮಾಧಾನಗೊಂಡಿದ್ದೆ ಎಂದು ಅವರು ಹೇಳಿದರು.
ಕಪಿಲ್ ದೇವ್ ಅವರನ್ನು ಕೊಲ್ಲಲು ಪಿಸ್ತೂಲು ಹಿಡಿದು ಅವರ ಮನೆಗೆ ಹೋಗಿದ್ದೆ. ಆದರೆ ಆ ವೇಳೆ ಅವರು ತಾಯಿಯ ಜೊತೆ ಹೊರಗೆ ಬಂದಿದ್ದರಿಂದ ನಾನು ಈ ನಿರ್ಧಾರದಿಂದ ಹಿಂದೆ ಸರಿದೆ ಎಂದು ಯೋಗರಾಜ್ ಘಟನೆಯನ್ನು ವಿವರಿಸಿದ್ದಾರೆ.
ತಂಡದಿಂದ ಕೈಬಿಟ್ಟಿದ್ದಕ್ಕೆ ಕಪಿಲ್ ದೇವ್ ಪ್ರಶ್ನೆ ಮಾಡುವಂತೆ ನನ್ನ ಪತ್ನಿ ಹೇಳಿದಳು. ಕಪಿಲ್ ದೇವ್ ಮನೆಗೆ ಹೋದಾಗ ಅವರ ತಾಯಿ ಮುಂದೆಯೇ ಜೋರಾಗಿ ಜಗಳ ಮಾಡಿದೆ. ಕೆಟ್ಟದಾಗಿ ನಿಂದಿಸಿದೆ. ನಾನು ಒಬ್ಬ ಸ್ನೇಹಿತನನ್ನು ಕಳೆದುಕೊಂಡೆ ಎಂದು ಅವರು ಹೇಳಿದರು.
ನಾನು ನಿಮ್ಮನ್ನು ಗುಂಡು ಹಾರಿಸಲು ಕೊಲ್ಲಲು ಬಯಸಿದ್ದೆ. ಆದರೆ ತಾಯಿ ಜೊತೆ ಇದ್ದೀರಿ. ಅದ್ಭುತ ತಾಯಿ ಹೊಂದಿದ್ದಿರ. ಅವರು ಜೊತೆಗೆ ಇದ್ದೀರ. ಅವರ ಮುಂದೆ ಕೊಲ್ಲಲು ಇಷ್ಟವಿಲ್ಲ ಎಂದು ಕಪಿಲ್ ದೇವ್ ಅವರಿಗೆ ನೇರವಾಗಿ ಹೇಳಿ ಬಂದೆ ಎಂದು ಅವರು ಹೇಳಿದರು.