ವಿಶ್ವದ ದಿಗ್ಗಜ ಸಾಫ್ಟ್ ವೇರ್ ಆಪಲ್ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ಸ್ ಪೊವೆಲ್ ಜಾಬ್ಸ್ ಕುಂಭಮೇಳದಲ್ಲಿ ಪಾಲ್ಗೊಂಡ ಎರಡನೇ ದಿನಕ್ಕೆ ಅಸ್ವಸ್ಥಗೊಂಡಿದ್ದಾರೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಐತಿಹಾಸಿಕ 45 ದಿನಗಳ ಕುಂಭ ಮೇಳದಲ್ಲಿ ಪಾಲ್ಗೊಂಡಿರುವ ಲಾರೆನ್ ಪೊವೆಲ್ ಜಾಬ್ಸ್ ಅಲರ್ಜಿಯಿಂದ ಬಳಲುತ್ತಿದ್ದಾರೆ.
ಸ್ಟೀವ್ ಜಾಬ್ಸ್ ಪತ್ನಿ, ತ್ರಿವಣಿ ಸಂಗಮದಲ್ಲಿ ಸ್ನಾನ ಮಾಡುವ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಅವರು ನನ್ನ ‘ಶಿವಿರ್’ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಕೆಲವು ಅಲರ್ಜಿ ಆಗಿವೆ ಎಂದು ಆಧ್ಯಾತ್ಮಿಕ ನಾಯಕ ಸ್ವಾಮಿ ಕೈಲಾಸಾನಂದ ಗಿರಿ ತಿಳಿಸಿದ್ದಾರೆ.
ಅವರು ಎಂದಿಗೂ ಜನದಟ್ಟಣೆಯ ಸ್ಥಳಕ್ಕೆ ಹೋಗಿಲ್ಲ. ಅವರು ತುಂಬಾ ಸರಳರು. ಪೂಜೆಯ ಸಮಯದಲ್ಲಿ ಅವರು ನಮ್ಮೊಂದಿಗೆ ಇದ್ದರು. ನಮ್ಮ ಸಂಪ್ರದಾಯ, ಆಚರಣೆಗಳನ್ನು ವೀಕ್ಷಿಸಲಿದ್ದಾರೆ ಎಂದು ಗಿರಿ ವಿವರಿಸಿದರು.
144 ವರ್ಷಗಳಲ್ಲಿ ಅಪರೂಪದ ಆಕಾಶ ಘಟನೆಯನ್ನು ಗುರುತಿಸುವ ಮಹಾ ಕುಂಭದಲ್ಲಿ ಭಾಗವಹಿಸಲು ಜಾಬ್ಸ್ ಸೋಮವಾರ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದು, ‘ಕಮಲಾ’ ಎಂಬ ಹಿಂದೂ ಹೆಸರು ನಾಮಕರಣ ಮಾಡಿಕೊಂಡಿದ್ದಾರೆ.
ಜನವರಿ 15 ರವರೆಗೆ ನಿರಂಜಿನಿ ಅಖಾರ ಶಿಬಿರದಲ್ಲಿರುವ ಕುಂಭ ಟೆಂಟ್ ನಗರದಲ್ಲಿ ತಂಗಲಿದ್ದಾರೆ, ನಂತರ ಜನವರಿ 20 ರಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಅಮೆರಿಕಕ್ಕೆ ಮರಳಲಿದ್ದಾರೆ.
ಮಂಗಳವಾರ ನಡೆಯುವ ಮೊದಲ ಅಮೃತ ಸ್ನಾನ ಅಥವಾ ಪವಿತ್ರ ಸ್ನಾನದಲ್ಲಿ, ಕನಿಷ್ಠ 3-4 ಕೋಟಿ ಜನರು ಗಂಗಾ, ಯಮುನಾ ಮತ್ತು ಅತೀಂದ್ರಿಯ ಸರಸ್ವತಿ ನದಿಗಳ ಸಂಗಮ ಬಿಂದುವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ ಎಂದು ವಿವರ ನೀಡಲಾಗಿದೆ.