Home ವಾಣಿಜ್ಯ ಒನ್‌ಪ್ಲಸ್ ಪರಿಚಯಿಸುತ್ತಿದೆ ಒನ್‌ಪ್ಲಸ್ 13 ಸೀರೀಸ್ ಗಾಗಿ ಫೋನ್ ಬದಲಿ ಪ್ಲಾನ್!

ಒನ್‌ಪ್ಲಸ್ ಪರಿಚಯಿಸುತ್ತಿದೆ ಒನ್‌ಪ್ಲಸ್ 13 ಸೀರೀಸ್ ಗಾಗಿ ಫೋನ್ ಬದಲಿ ಪ್ಲಾನ್!

ತಮ್ಮ ಹೊಸ ಒನ್‌ಪ್ಲಸ್ 13 ಅಥವಾ ಒನ್‌ಪ್ಲಸ್ 13R ನಲ್ಲಿ ಯಾವುದೇ ಹಾರ್ಡ್ವೇರ್ ಸಮಸ್ಯೆ ಎದುರಿಸಿದ ಸಂದರ್ಭಗಳಲ್ಲಿ ಖರೀದಿಯ ಮೊದಲ 180 ದಿನಗಳೊಳಗೆ ಉಚಿತ ಬದಲಿ ಪಡೆಯಬಹುದು ಎಂದು ಪ್ರಕಟಿಸಿದೆ.

by Editor
0 comments
mobile

ಬೆಂಗಳೂರು: ಜಾಗತಿಕ ತಂತ್ರಜ್ಞಾನ ಬ್ರ್ಯಾಂಡ್, ಒನ್‌ಪ್ಲಸ್ ಫೆಬ್ರವರಿ 13, 2025ರ ಒಳಗೆ ಒನ್‌ಪ್ಲಸ್ 13 ಸೀರೀಸ್ ಮೊಬೈಲ್  ಖರೀದಿಸುವ ಬಳಕೆದಾರರು ತಮ್ಮ ಹೊಸ ಒನ್‌ಪ್ಲಸ್ 13 ಅಥವಾ ಒನ್‌ಪ್ಲಸ್ 13R ನಲ್ಲಿ ಯಾವುದೇ ಹಾರ್ಡ್ವೇರ್ ಸಮಸ್ಯೆ ಎದುರಿಸಿದ ಸಂದರ್ಭಗಳಲ್ಲಿ ಖರೀದಿಯ ಮೊದಲ 180 ದಿನಗಳೊಳಗೆ ಉಚಿತ ಬದಲಿ ಪಡೆಯಬಹುದು ಎಂದು ಪ್ರಕಟಿಸಿದೆ.

ಈ ವಿಶಿಷ್ಟ ಮತ್ತು ಮೊದಲನೆಯ ರೀತಿಯ ಪ್ಲಾನ್ ಅವರಿಗೆ ತಕ್ಷಣವೇ ಉಚಿತವಾಗಿ ಬದಲಿ ಸಾಧನವನ್ನು ಪಡೆಯುವುದನ್ನು ಸಾಧ್ಯವಾಗಿಸುತ್ತದೆ.

ಒನ್‌ಪ್ಲಸ್ ಇಂಡಿಯಾದ ಸಿಇಒ ಆಗಿರುವ ರಾಬಿನ್ ಲಿಯು ಮಾತನಾಡಿ, “ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಈ ರಕ್ಷಣೆ ಯೋಜನೆಯನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಒನ್‌ಪ್ಲಸ್ 13 ಸೀರೀಸ್ ಗಾಗಿ 180-ದಿನಗಳ ಫೋನ್ ಬದಲಿ ಪ್ಲಾನ್ ನಮ್ಮ ಉತ್ಪನ್ನಗಳ ವಿಶ್ವಾಸಾರ್ಹತೆಯಲ್ಲಿನ ನಮ್ಮ ನಂಬಿಕೆಯನ್ನು ಮತ್ತು ಗ್ರಾಹಕರಿಗಾಗಿನ ನಮ್ಮ ನಿರಂತರ ಕಾಳಜಿಯನ್ನು ಪ್ರದರ್ಶಿಸುತ್ತದೆ. ಈ ಮೂಲಕ ನಾವು ನಮ್ಮ ಸ್ಥಳೀಯ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ಸಹ ನಿರಂತರವಾಗಿ ಒದಗಿಸಬಹುದಾಗಿದೆ.” ಎಂದರು.

ಬ್ರ್ಯಾಂಡ್ ಖಾತ್ರಿಯಿಂದ ಚಾಲನೆಗೊಂಡ ಉಪಕ್ರಮ

banner

ಈ ಉದ್ಯಮ ಚಾಲಿತ ಉಪಕ್ರಮದಿಂದ ಬಳಕೆದಾರರಿಗೆ ಮೊದಲ ಸ್ಥಾನ ನೀಡುವ ಒನ್‌ಪ್ಲಸ್ ನ ಬದ್ಧತೆಯನ್ನು ಪ್ರದರ್ಶಿಸುತ್ತದೆ ಮತ್ತು ಪರದೆಗಳು, ಬ್ಯಾಕ್ ಕವರ್‌ಗಳು, ಬ್ಯಾಟರಿಗಳು ಮತ್ತು ಮದರ್‌ಬೋರ್ಡ್‌ಗಳು ಸೇರಿದಂತೆ ಎಲ್ಲಾ ಸಾಧನ ಘಟಕಗಳ ಬದಲಿಯನ್ನು ಒಳಗೊಂಡಿರುತ್ತದೆ. ಗ್ರಾಹಕರು ಹೊಸ ಫೋನ್ ಖರೀದಿಸಿದ ಮೊದಲ 180 ದಿನಗಳ ಅವಧಿಯೊಳಗೆ ಯಾವುದೇ ಹಾರ್ಡ್ವೇರ್ ಸಮಸ್ಯೆಗಳು ಎದುರಿಸಿದ ಸಂದರ್ಭದಲ್ಲಿ, ರಿಪೇರಿ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ತಪ್ಪಿಸಲು ಮತ್ತು ಚಿಂತೆ ಮುಕ್ತ ಅನುಭವವನ್ನು ಖಾತ್ರಿಪಡಿಸಲು ಒಂದು ಸಲದ ಮೊಬೈಲ್/ಸಾಧನದ ಬದಲಿ ಪಡೆಯಲು ಅರ್ಹರಿರುತ್ತಾರೆ.

ವಿನಿಮಯ ಪ್ರಕ್ರಿಯೆಯು ಬಹಳ ಸರಳ ಮತ್ತು ಬಳಕೆದಾರ ಸ್ನೇಹಿಯಾಗಿದೆ. ಗ್ರಾಹಕರು ಬದಲಿ ಸಾಧನವನ್ನು ಪಡೆಯಲು ಮತ್ತು ತಮ್ಮ ಅರ್ಹತೆಯನ್ನು ದೃಢಪಡಿಸಲು ಯಾವುದೇ ಅಧಿಕೃತ ಸರ್ವಿಸ್ ಸೆಂಟರ್ ಗೆ ಭೇಟಿ ನೀಡಬಹುದು. ಜನವರಿ 10 ರಿಂದ ಫೆಬ್ರವರಿ 13ರವರೆಗೆ, ಒನ್‌ಪ್ಲಸ್ 13 ಸೀರೀಸ್ ಖರೀದಿಸುವ ಯಾವುದೇ ಗ್ರಾಹಕರಿಗೆ ಸೇವೆಯನ್ನು ಶುಲ್ಕರಹಿತವಾಗಿ ಉಚಿತವಾಗಿ ಕೊಡಲಾಗುವುದು. ಈ ಸಮಯ ಮುಗಿದ ನಂತರ, ಐಚ್ಛಿಕ ಪಾವತಿ ರಕ್ಷಣೆ ಪ್ಲಾನ್ ಮೂಲಕ ಈ ಪ್ರೀಮಿಯಂ ಸೇವೆಯು ಲಭ್ಯವಿರುತ್ತದೆ. ಒನ್‌ಪ್ಲಸ್ 13 ಗಾಗಿ ಸೇವಾ ದರ ರೂ. 2599 ಮತ್ತು ಒನ್‌ಪ್ಲಸ್ 13R ಗಾಗಿ ಸೇವಾ ದರ ರೂ. 2299 ಆಗಿರುತ್ತದೆ ಮತ್ತು ಗ್ರಾಹಕರ ನೆಮ್ಮದಿಯನ್ನು ಹೆಚ್ಚಿನ ಸಮಯದವರೆಗೆ ಖಾತ್ರಿಪಡಿಸಿಕೊಳ್ಳಲು ಹೆಚ್ಚುವರಿ ಮೂರು ತಿಂಗಳ ಸಮಯದವರೆಗೆ ಈ ಪ್ಲಾನ್ ಅನ್ನು ವಿಸ್ತರಿಸಲಾಗಿದೆ.

ಭಾರತದಲ್ಲಿ ಸುಧಾರಿತ ನಾವಿನ್ಯತೆ ಮತ್ತು ಉತ್ಕೃಷ್ಟ ಸೇವೆ

180-ದಿನ ಫೋನ್ ಬದಲಿ ಪ್ಲಾನ್’ ಒನ್ ಪ್ಲಸ್ ನ ಭಾರತದಲ್ಲಿನ ಪ್ರಾಜೆಕ್ಟ್ ಸ್ಟಾರ್ ಲೈಟ್ ನ ಭಾಗವಾಗಿದ್ದು, ಇದು ಸಾಧನದ ಬಾಳಿಕೆಯನ್ನು ಹೆಚ್ಚಿಸಲು, ಉತ್ಕೃಷ್ಟ ಸೇವೆಯನ್ನು ಪೂರೈಸಲು ಮತ್ತು ಭಾರತೀಯ ಮರುಕಟ್ಟೆಗಾಗಿಯೆಂದೇ ವಿಶೇಷವಾಗಿ ವಿನ್ಯಾಸಗೊಳಿಸಿದ ವೈಶಿಷ್ಟ್ಯತೆಗಳನ್ನು ರಚಿಸಲು ಪ್ರದೇಶದಲ್ಲಿನ ಭವಿಷ್ಯದ ಹೂಡಿಕೆಗಾಗಿ ಕಾರ್ಯತಾಂತ್ರಿಕ ದೂರದೃಷ್ಟಿಯನ್ನು ಹೊಂದಿದೆ.

ತನ್ನ ಸೇವಾ ಸಾಮರ್ಥ್ಯವನ್ನು ಮತ್ತು ಗುಣಮಟ್ಟವನ್ನು ಹೆಚ್ಚಿಸಲು, ಒನ್‌ಪ್ಲಸ್ ತನ್ನ ಸೇವಾ ಜಾಲವನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಇದರ ಜೊತೆಗೆ ತನ್ನ ಸೇವಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಮತ್ತು ಸೇವಾ ಪ್ರಕ್ರಿಯೆಗಳನ್ನು ಅತ್ಯುತ್ತಮವಾಗಿಸುವ ಮೂಲಕ ಒನ್‌ಪ್ಲಸ್ ಭಾರತದಲ್ಲಿ ತನ್ನ ಮಾರಾಟದ ನಂತರದ ಸೇವಾ ಬೆಂಬಲವನ್ನು ಹೆಚ್ಚಿಸಿದೆ. ಪ್ರಾಜೆಕ್ಟ್ ಸ್ಟಾರ್‌ಲೈಟ್ ಮೂಲಕ, ಒನ್‌ಪ್ಲಸ್ ಗ್ರಾಹಕರಿಗೆ ವೇಗದ ಪ್ರತಿಕ್ರಿಯೆಗಳು, ಉತ್ತಮ ಪಾರದರ್ಶಕತೆ, ಹೆಚ್ಚಿದ ಬಳಕೆದಾರ ಜಾಗೃತಿ ಕಾರ್ಯಕ್ರಮಗಳು ಮತ್ತು ಸ್ಟೋರ್ ಗಳಲ್ಲಿನ ಹೆಚ್ಚು ಅನುಕೂಲಕರ ಅನುಭವಗಳನ್ನು ನೀಡುವುದನ್ನು ಮುಂದುವರಿಸುತ್ತದೆ.

ಒನ್‌ಪ್ಲಸ್ 13 ಸೀರೀಸ್: ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಯಲ್ಲಿ ವಿಶ್ವಾಸ

ಕಳೆದ ರಾತ್ರಿ   ಒನ್‌ಪ್ಲಸ್ 13 ಸೀರೀಸ್ ಅನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲಾಯಿತು. ಒನ್‌ಪ್ಲಸ್ 13 ಮತ್ತು ಒನ್‌ಪ್ಲಸ್ 13R ಎರಡೂ, ಪ್ರತಿದಿನದ ಬಳಕೆಗಾಗಿ ಅತ್ಯುತ್ತಮ ಚಿತ್ರ, ಸುಂದರ ವಿನ್ಯಾಸ, ಸುಧಾರಿತ ಎಐ ಮತ್ತು ವಿಶ್ವಾಸರ್ಹ ಕಾರ್ಯಕ್ಷಮತೆಯನ್ನು ಒತ್ತಿ ಹೇಳುತ್ತದೆ. ಇತ್ತೀಚಿನ ಸ್ನ್ಯಾಪ್ ಡ್ರ್ಯಾಗನ್ ಮೊಬೈಲ್ ಪ್ಲಾಟ್ಫಾರ್ಮ್ಸ್ ನಿಂದ ಚಾಲನೆಗೊಂಡು, ಆಕ್ಸಿಜನ್OS 15 ನೊಂದಿಗೆ ಅತ್ಯುತ್ತಮವಾಗಿಸಿರುವ ಈ ಸಾಧನಗಳು ಸಾಟಿಯಿಲ್ಲದ ಬಹು ಕಾರ್ಯಗಳ ನಿರ್ವಹಣೆ, ಗೇಮಿಂಗ್ ಮತ್ತು ಬಳಕೆದಾರ ಅನುಭವವನ್ನು ನೀಡುವ ಜೊತಯಲ್ಲಿ ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಸಹ ಹೆಚ್ಚಿಸುತ್ತದೆ.

ಸದೃಢ ಮೂರು ಕ್ಯಾಮೆರಾ ವ್ಯವಸ್ಥೆಗಳೊಂದಿಗೆ ತಯಾರಾಗಿರುವ ಈ ಎರಡೂ ಮಾದರಿಗಳು, ಯಾವುದೇ ಸೆಟ್ಟಿಂಗ್‌ನಲ್ಲಿ ವೃತ್ತಿಪರ ದರ್ಜೆಯ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಬಳಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. ಸುಧಾರಿತ ಬಾಳಿಕೆ ಮತ್ತು ಸುಂದರ ವಿನ್ಯಾಸದೊಂದಿಗೆ, ಒನ್‌ಪ್ಲಸ್ 13 ಸೀರೀಸ್ ಅನುಕೂಲಕರ, ಸುಂದರ ಮತ್ತು ಒಳ್ಳೆಯ ಹಿಡಿತವನ್ನು ನೀಡುತ್ತದೆ. “180-ದಿನಗಳ ಫೋನ್ ಬದಲಿ ಯೋಜನೆ”ಯಿಂದ ಬೆಂಬಲಿತವಾದ ಒನ್‌ಪ್ಲಸ್ 13 ಸೀರೀಸ್ ಮಾರುಕಟ್ಟೆಯಲ್ಲಿ ಜಾಣ್ಮೆಯ, ವಿಶ್ವಾಸಾರ್ಹ ಮತ್ತು ಸಮಗ್ರ ಫ್ಲಾಗ್ ಶಿಪ್ ಆಯ್ಕೆಯಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
304 ರನ್ ನಿಂದ ಗೆದ್ದು ಏಕದಿನ ಕ್ರಿಕೆಟ್ ನಲ್ಲಿ ಹಲವು ದಾಖಲೆ ಬರೆದ ಭಾರತ ವನಿತೆಯರು! 435 ರನ್ ಪೇರಿಸಿ ಏಕದಿನ ಕ್ರಿಕೆಟ್ ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ವನಿತೆಯರು! ಸಚಿವ ಕೃಷ್ಣ ಭೈರೇಗೌಡಗೆ ಸಂಕಷ್ಟ: ಕಂದಾಯ ಇಲಾಖೆ ಭ್ರಷ್ಟಾಚಾರ ತನಿಖೆಗೆ ರಾಜ್ಯಪಾಲರಿಗೆ ದೂರು! ದಕ್ಷಿಣ ಭಾರತದ ಕುಂಭಮೇಳ ಕೊಪ್ಪಳದ ಗವಿಮಠದ ಜಾತ್ರಾ ಮಹೋತ್ಸವಕ್ಕೆ ಚಾಲನೆ ಕೆಡಿಎಂ ಕುಂಭ ಡಿಜಿಟಲ್ ಮೇಳ: 90 ಕಡೆ ಮೊಬೈಲ್ ಚಾರ್ಜಿಂಗ್ ಶಿಬಿರ! ಕನ್ನಡ ಚಿತ್ರರಂಗ ಖ್ಯಾತ ಹಾಸ್ಯ ನಟ, ರಂಗಕರ್ಮಿ ಸರಿಗಮ ವಿಜಿ ಇನ್ನಿಲ್ಲ ಒನ್‌ಪ್ಲಸ್ ಪರಿಚಯಿಸುತ್ತಿದೆ ಒನ್‌ಪ್ಲಸ್ 13 ಸೀರೀಸ್ ಗಾಗಿ ಫೋನ್ ಬದಲಿ ಪ್ಲಾನ್! ಕಲಬುರಗಿಯಲ್ಲಿ 17 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಕುಳಿತಲ್ಲೇ ಹೃದಯಾಘಾತದಿಂದ ಸಾವು ಮೈಸೂರು ಆಸ್ಪತ್ರೆಗೆ ನಟ ದರ್ಶನ್ ಭೇಟಿ: 3 ದಿನದಲ್ಲಿ ಶಸ್ತ್ರಚಿಕಿತ್ಸೆ? ಪೊಲೀಸರ ಸಮ್ಮುಖದಲ್ಲೇ ಮಗಳಿಗೆ ಗುಂಡಿಕ್ಕಿ ಕೊಂದ ತಂದೆ!