Home ತಾಜಾ ಸುದ್ದಿ ಮೋದಿ 100 ಗಂಟೆ ಕೆಲಸ ಮಾಡುವಾಗ ನಾವೇಕೆ 70 ಗಂಟೆ ಕೆಲಸ ಮಾಡಬಾರದು: ಇನ್ಫೋಸಿಸ್ ನಾರಾಯಣ ಮೂರ್ತಿ!

ಮೋದಿ 100 ಗಂಟೆ ಕೆಲಸ ಮಾಡುವಾಗ ನಾವೇಕೆ 70 ಗಂಟೆ ಕೆಲಸ ಮಾಡಬಾರದು: ಇನ್ಫೋಸಿಸ್ ನಾರಾಯಣ ಮೂರ್ತಿ!

by Editor
0 comments
narayana murthy

ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧನಾಗಿದ್ದು, ನಿಲುವು ಬದಲಿಸುವುದಿಲ್ಲ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಸಿಎನ್ ಬಿಸಿ ಜಾಗತಿಕ ನಾಯಕ ಸಮ್ಮೇಳನದಲ್ಲಿ ಮಾತನಾಡಿದ ಅವರು, 70 ಗಂಟೆಗಳ ಕೆಲಸ ಅವಧಿ ಬಗ್ಗೆ ನನ್ನ ಹೇಳಿಕೆ ಬಗ್ಗೆ ಸಾಕಷ್ಟು ಟೀಕೆ ಬಂದಿದೆ. ಆದರೆ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ದೇಶ ಅಭಿವೃದ್ದಿ ಆಗಬೇಕಾದರೆ ಕಠಿಣ ಶ್ರಮ ಅಗತ್ಯವಿದೆ ಹೊರತು ಆರಾಮ ಜೀವನದಿಂದ ಅಲ್ಲ. ಪ್ರಧಾನಿ ನರೇಂದ್ರ ಮೋದಿ ಈ ವಯಸ್ಸಿನಲ್ಲಿಯೂ ವಾರದಲ್ಲಿ 100 ಗಂಟೆಗಳ ಕೆಲಸ ಮಾಡುತ್ತಿದ್ದಾರೆ. ಬೇರೆಯವರಿಗೆ 70 ಗಂಟೆ ಕೆಲಸ ಮಾಡಲು ಏನು ಕಷ್ಟ ಎಂದು ಅವರು ಪ್ರಶ್ನಿಸಿದರು.

ಕಠಿಣ ಶ್ರಮ ಪಡುವವರನ್ನು ಪ್ರಶಂಸಿಸುತ್ತಾರೆ. ಆದರೆ ನಾವು ಮಾಡಬೇಕು ಎಂದಾಗ ನೋವಾಗುತ್ತದೆ. ಜರ್ಮನಿ ಮತ್ತು ಜಪಾನ್ ರಾಷ್ಟ್ರಗಳು ಕೂಡ ಭಾರತೀಯರು ಕಠಿಣ ಶ್ರಮದ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿರುವುದನ್ನು ಅವರು ಉಲ್ಲೇಖಿಸಿದರು.

banner

ಜರ್ಮನಿ ಮತ್ತು ಜಪಾನ್ ದೇಶಗಳು ಅಭಿವೃದ್ಧಿ ಆಗಲು ಅಲ್ಲಿನ ಜನರು ಕಷ್ಟಪಟ್ಟು ದುಡಿಯುತ್ತಾರೆ.  ನಾನು ಕೆಲಸ ಮಾಡುವಾಗಲೂ ವಾರದಲ್ಲಿ 6.5 ದಿನ ಅಂದರೆ ದಿನಕ್ಕೆ 14 ಗಂಟೆ ಕೆಲಸ ಮಾಡುತ್ತಿದ್ದೆ. ಮುಂಜಾನೆ 6.30ಕ್ಕೆ ಕಚೇರಿಗೆ ಬಂದರೆ ರಾತ್ರಿ 8.40ಕ್ಕೆ ಮರಳುತ್ತಿದ್ದೆ ಎಂದು ನಾರಾಯಣಮೂರ್ತಿ ವಿವರಿಸಿದರು.

ಕಠಿಣ ಶ್ರಮವೊಂದೇ ಅಭಿವೃದ್ದಿಗೆ ದಾರಿ. ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನೀವು ಎಷ್ಟೇ ಬುದ್ದಿವಂತರಾಗಿದ್ದರೂ ಕೂಡ ಕಠಿಣ ಶ್ರಮ ಪಡಲೇಬೇಕು ಎಂದು ಅವರು ಹೇಳಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಚಿಕ್ಕಮಗಳೂರು: ಇಬ್ಬರು ಮಕ್ಕಳ ಎದುರೇ ಪ್ರಿಯಕರನಿಂದ ಕೊಲೆಯಾದ ಗೃಹಿಣಿ! ಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ! 2ನೇ ಟೆಸ್ಟ್: ಆಸ್ಟ್ರೇಲಿಯಾ 10 ವಿಕೆಟ್ ಜಯಭೇರಿ, ಸರಣಿ 1-1ರಿಂದ ಸಮ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಆಸ್ಪತ್ರೆಗೆ ದಾಖಲು! ಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್ ಕಿದ್ವಾಯಿಯಲ್ಲಿ ಒಂದೇ 24 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ, 146 ಕೋಟಿ ಬಿಲ್: ಡಿಸಿಎಂ ಡಿಕೆ ಶಿವಕುಮಾರ್ ಶ್ರೀರಂಗ ಕುಡಿಯವ ನೀರು ಪೂರೈಸುವ ಯೋಜನೆ 2026ಕ್ಕೆ ಪೂರ್ಣ: ರಾಜ್ಯ ಸರ್ಕಾರ 2ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಇಲ್ಲ: ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ತೀರ್ಮಾನ 2nd Test: ಆಸ್ಟ್ರೇಲಿಯಾಗೆ ಹೆಡ್ ಶತಕದ ಬಲ: ಭಾರತಕ್ಕೆ 157 ರನ್ ಹಿನ್ನಡೆ