Thursday, 19 November 2026 — Kannadavahini
BREAKING NEWS
ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ! ತಾಜಾ ಸುದ್ದಿ 2070ರ ವೇಳೆಗೆ ಹಿಂದೂ ಜನಸಂಖ್ಯೆ ಕುಸಿತ; ಮುಸ್ಲಿಮರ ಸಂಖ್ಯೆ ಜಿಗಿತ! ಕಾನೂನು ಧರ್ಮಸ್ಥಳ ಪ್ರಕರಣ ರದ್ದು ಕೋರಿ ಗಿರೀಶ್ ಮಟ್ಟಣ್ಣನವರ್ ಅರ್ಜಿ ವಜಾ ರಾಜ್ಯ ತಾಪಂ, ಜಿಪಂ ಕ್ಷೇತ್ರ ಮೀಸಲು ನಾಳೆ ಅಂತಿಮ ಅಧಿಸೂಚನೆ: ಸಚಿವ ಈಶ್ವರ ಖಂಡ್ರೆ ಕಾನೂನು ಧಾರ್ಮಿಕ ಆಚರಣೆ ವೇಳೆ ಪ್ರಾಣಿ ವಧೆ ನಿಷೇಧ ಅರ್ಜಿ ವಜಾ ದೇಶ ಶರಣಾಗುವ ಬದಲು ಅಲ್ಲಾ ಬಳಿ ಹೋಗ್ತಿನಿ ಅಂದ ಲಷ್ಕರೆ ಉಗ್ರ ಮಟಾಷ್ ಬೆಂಗಳೂರು ಸತ್ವ ಸಿಟಿಯಿಂದ ಬೆಂಗಳೂರು ಮಕ್ಕಳ ಕಲ್ಪನಾಶಕ್ತಿಗೆ ವೇದಿಕೆ ‘ವರ್ಲ್ಡ್ ಆಫ್ ವಂಡರ್ಸ್’ ಅನಾವರಣ ರಾಜ್ಯ 1000 ವಿದ್ಯಾರ್ಥಿಗಳ ಕೌಶಲ್ಯಗೊಳಿಸಲು ರಾಜ್ಯ ಸರ್ಕಾರದೊಂದಿಗೆ ಜ್ಞಾನಿ AI ಒಪ್ಪಂದಕ್ಕೆ ಸಹಿ ರಾಜ್ಯ ಕಾವೇರಿ 2.0 ಪೋರ್ಟಲ್ ಮೂಲಕ ಮನೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಿ!
ತಾಜಾ ಸುದ್ದಿ

ಷೇರು ಮಾರುಕಟ್ಟೆ: 4 ದಿನದಲ್ಲಿ ಹೂಡಿಕೆದಾರರಿಗೆ 24.69 ಲಕ್ಷ ಕೋಟಿ ರೂ. ನಷ್ಟ!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 25 ವೀಕ್ಷಣೆಗಳು
note

ಕಳೆದ 4 ದಿನಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಉಂಟಾಗಿರುವ ಷೇರುಗಳ ತೀವ್ರ ಕುಸಿತದಿಂದ ಹೂಡಿಕೆದಾರರಿಗೆ ಸುಮಾರು 24.69 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆಗಳ ಏರಿಕೆ, ವಿದೇಶಿ ನಿಧಿಯ ನಿರಂತರ ಹೊರಹರಿವು, ಆರಂಭಿಕ ದರ ಕಡಿತದ ನಿರೀಕ್ಷೆಗಳು ಕುಸಿದಿದೆ. ಮತ್ತೊಂದೆಡೆ ಅಮೆರಿಕದ ಉದ್ಯೋಗ ದತ್ತಾಂಶ ಮತ್ತು ಸುಮಾರು 2 ವರ್ಷಗಳಲ್ಲಿ ರೂಪಾಯಿ ಮೌಲ್ಯ ಕಳಪೆ ಮೊತ್ತಕ್ಕೆ ಕುಸಿದಿರುವುದು ಭಾರತೀಯ ಹೂಡಿಕೆದಾರರ ಭಾರೀ ನಷ್ಟಕ್ಕೆ ಕಾರಣವಾಗಿದೆ.

ಕಳೆದ ನಾಲ್ಕು ದಿನಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 1,869.1 ಪಾಯಿಂಟ್‌ ಅಥವಾ ಶೇ. 2.39 ರಷ್ಟು ಕುಸಿತ ಕಂಡಿದೆ.

ನಾಲ್ಕನೇ ದಿನವಾದ ಶುಕ್ರವಾರ ಕೂಡ ಸತತ ವಹಿವಾಟಿನಲ್ಲಿ ಕುಸಿತ ಕಂಡ 30 ಷೇರುಗಳ ಬಿಎಸ್‌ಇ ಮಾನದಂಡ ಸೆನ್ಸೆಕ್ಸ್ 1,048.90 ಪಾಯಿಂಟ್‌ಗಳ ಅಥವಾ ಶೇಕಡಾ 1.36 ರಷ್ಟು ಕುಸಿದು ಅಂತಿಮವಾಗಿ 76,330.01 ಕ್ಕೆ ಸ್ಥಿರವಾಯಿತು. ದಿನದ ಅಂತ್ಯದಲ್ಲಿ, ಅದು 1,129.19 ಪಾಯಿಂಟ್‌ಗಳು ಅಥವಾ ಶೇಕಡಾ 1.45 ರಷ್ಟು ಕುಸಿದು 76,249.72 ಕ್ಕೆ ತಲುಪಿದೆ.

ಬಿಎಸ್‌ಇ-ಪಟ್ಟಿಯಾದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು ನಾಲ್ಕು ದಿನಗಳಲ್ಲಿ ರೂ. 24,69,243.3 ಕೋಟಿಗಳಷ್ಟು ಕುಸಿದು ರೂ. 4,17,05,906.74 ಕೋಟಿ (ಯುಎಸ್‌ಡಿ 4.82 ಟ್ರಿಲಿಯನ್) ತಲುಪಿದೆ. ಸೋಮವಾರದ ಷೇರುಗಳಲ್ಲಿನ ತೀವ್ರ ಕುಸಿತದೊಂದಿಗೆ, ಬಿಎಸ್‌ಇ-ಪಟ್ಟಿಯಾದ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣವು 5 ಟ್ರಿಲಿಯನ್ ಡಾಲರ್‌ಗಿಂತ ಕಡಿಮೆಯಾಗಿದೆ.

ಸೋಮವಾರ ಒಂದೇ ದಿನ ಹೂಡಿಕೆದಾರರು 12.61 ಲಕ್ಷ ಕೋಟಿ ರೂ. ನಷ್ಟ ಮಾಡಿಕೊಂಡಿದ್ದರು. ಸುಮಾರು 20,000 ವಿದೇಶೀ ಷೇರುಗಳು ಭಾರೀ ಬೆಲೆಗೆ ಮಾರಾಟವಾಗಿದ್ದವು. ಡಾಲರ್ ಎದುರು ರೂಪಾಯಿ ತೀರ ಕಳಪೆ ಮಟ್ಟಕ್ಕೆ ಇಳಿದಿದ್ದು, ಹೂಡಿಕೆದಾರರಿಗೆ ದೊಡ್ಡ ಹೊಡೆತ ನೀಡಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8429 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment