ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಜನಪ್ರಿಯ ಐಪಿಎಲ್ ತಂಡವಾಗಿ ಹೊರಹೊಮ್ಮಿದೆ.
ಆರ್ ಸಿಬಿ ಒಂದು ಬಾರಿಯೂ ಐಪಿಎಲ್ ಪ್ರಶಸ್ತಿ ಗೆಲ್ಲದೇ ಇದ್ದರೂ ಅತೀ ಹೆಚ್ಚು ಬಾರಿ ಪ್ರಶಸ್ತಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಹಿಂದಿಕ್ಕಿ ಸತತ 5ನೇ ಬಾರಿ ಅತ್ಯಂತ ಜನಪ್ರಿಯ ಪಟ್ಟ ಉಳಿಸಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ಅಂದರೆ ಫೇಸ್ ಬುಕ್, ಇನ್ ಸ್ಟಾಗ್ರಾಂ, ಎಕ್ಸ್, ಯೂಟ್ಯೂಬ್ ಗಳಲ್ಲಿ ಆರ್ ಸಿಬಿ ತಂಡ 2 ಶತಕೋಟಿ ಎಂಗೇಜ್ ಮೆಂಟ್ ಹೊಂದಿದೆ. ಪ್ರತಿಸ್ಪರ್ಧಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚು ಅಭಿಮಾನಿಗಳನ್ನು ಸೆಳೆದಿಟ್ಟುಕೊಂಡಿದೆ.
ಆರ್ ಸಿಬಿ ತಂಡ ಸಾಮಾಜಿಕ ಜಾಲತಾಣದಲ್ಲಿ ಒಟ್ಟಾರೆ 5 ದಶಲಕ್ಷ ಫಾಲೋವರ್ಸ್ ಹೊಂದಿದೆ. ಈ ಮೂಲಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಪಿಎಲ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿರುವ ಆರ್ ಸಿಬಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿದ ಕ್ರೀಡಾ ತಂಡಗಳ ಪೈಕಿ 5ನೇ ಸ್ಥಾನದಲ್ಲಿದೆ. ಅದರಲ್ಲೂ ರಿಯಲ್ ಮ್ಯಾಡ್ರಿಡ್ ಮತ್ತು ಬಾರ್ಸಿಲೋನಾ ಫುಟ್ಬಾಲ್ ಕ್ಲಬ್ ತಂಡಗಳ ನಂತರ ಸ್ಥಾನ ಪಡೆದು ಸಂಭ್ರಮಿಸುತ್ತಿದೆ.
ಮತ್ತೊಂದು ವಿಶೇಷ ಅಂದರೆ ಆರ್ ಸಿಬಿ ವಾಟ್ಸಪ್ ಚಾನೆಲ್ ನಲ್ಲಿ ದಾಖಲೆಯ 7.5 ದಶಲಕ್ಷ ಫಾಲೋವರ್ಸ್ ಗಳನ್ನು ಪಡೆದಿದೆ. ಐಪಿಎಲ್ ಅಥವಾ ಐಪಿಎಲ್ ತಂಡಗಳಿಗೆ ಹೋಲಿಸಿದರೆ ಅದೆಷ್ಟೋ ಪಟ್ಟು ಹೆಚ್ಚು ಫಾಲೋವರ್ಸ್ ಹೊಂದಿದ ದಾಖಲೆ ಬರೆದಿದೆ.
ಆರ್ ಸಿಬಿ ತಂಡದ ಸಾಮಾಜಿಕ ಜಾಲತಾಣದ ಉಸ್ತುವಾರಿಯನ್ನು 12 ಮ್ಯಾನ್ ಆರ್ಮಿ [12th Man Army] ಎಂಬ ಸಂಸ್ಥೆ ನೋಡಿಕೊಳ್ಳುತ್ತಿದೆ.