ಬಾಲಿವುಡ್ ನಟ ಸೈಫ್ ಅಲಿ ಖಾನ್ ದೇಹ ಹೊಕ್ಕಿದ್ದ 2.5 ಇಂಚು ಉದ್ದದ ಚಾಕುವಿನ ತುಂಡನ್ನು ವೈದ್ಯರು ಹೊರತೆಗೆದಿದ್ದು, ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ.
ಗುರುವಾರ ಮುಂಜಾನೆ ಮನೆಗೆ ನುಗ್ಗಿದ್ದ ದುಷ್ಕರ್ಮಿ 6 ಬಾರಿ ಸೈಫ್ ಅಲಿ ಖಾನ್ ಅವರನ್ನು ಇರಿದಿದ್ದು, ಎರಡು ಕಡೆ ಆಳವಾದ ಗಾಯ ಉಂಟಾಗಿದ್ದು, ಒಂದು ಕಡೆ ಚಾಕುವಿನ ತುಂಡು ಸಿಲುಕಿಕೊಂಡಿತ್ತು.
ಗುರುವಾರ ರಾತ್ರಿ ಸುಮಾರು 5 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆಸಿದ ಮುಂಬೈನ ಬಾಂದ್ರಾದಲ್ಲಿರುವ ಲೀಲಾವತಿ ಆಸ್ಪತ್ರೆ ವೈದ್ಯರು ೨.೫ ಇಂಚು ಉದ್ದದ ಚಾಕುವಿನ ತುಂಡು ಹೊರತೆಗೆದಿದ್ದಾರೆ.
ಶುಕ್ರವಾರ ಸೈಫ್ ಅಲಿ ಖಾನ್ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ವೈದ್ಯರು ೨ ಮಿ.ಮೀ. ಒಳಗೆ ಚಾಕು ಹೋಗಿದ್ದರೂ ಜೀವಕ್ಕೆ ಅಪಾಯ ಆಗುತ್ತಿತ್ತು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬೆನ್ನಿನ ಮೂಳೆ ಭಾಗದಲ್ಲಿ ಸಿಲುಕಿದ್ದ ಚಾಕು ಹೊರತೆಗೆಯಲಾಗಿದೆ. ಇದೀಗ ಸೈಫ್ ಅಲಿ ಖಾನ್ ಅವರನ್ನು ಐಸಿಯುನಿಂದ ವಿಶೇಷ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಈಗ ಅವರು ನಡೆಯಬಹುದು. ನಡೆದಾಗ ನೋವು ಕಾಣಿಸಿಕೊಳ್ಳುವುದಿಲ್ಲ ಎಂದು ವೈದ್ಯರು ವಿವರಿಸಿದ್ದಾರೆ.
ಸೈಫ್ ಅಲಿ ಖಾನ್ ಅವರನ್ನು ವಿಶೇಷ ವಾರ್ಡ್ ಗೆ ಶಿಫ್ಟ್ ಮಾಡಲಾಗಿದ್ದರೂ ಒಂದು ವಾರ ಕಾಲ ಭೇಟಿಗೆ ಅವಕಾಶ ನೀಡುವುದಿಲ್ಲ. ಗಾಯ ವಾಸಿ ಆಗುವವರೆಗೂ ಸೋಂಕು ತಗುಲಬಾರದು ಎಂಬ ಕಾರಣಕ್ಕೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆಸ್ಪತ್ರೆಗೆ ಬರುವಾದ ಸೈಫ್ ಅವರು ರಕ್ತಸ್ರಾವದಿಂದ ಬಳಲಿದ್ದರು. ಆದರೂ ಅವರು ಶೀಘ್ರವಾಗಿ ಚೇತರಿಸಿಕೊಂಡಿದ್ದಾರೆ. ಅವರ ಹೋರಾಟ, ಧೈರ್ಯ ಸಿಂಹದಂತೆ ಇದೆ. ಅವರು ಯಾವುದೇ ಸಹಾಯ ಇಲ್ಲದೇ ನಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವೈದ್ಯರು ಪ್ರಶಂಸಿಸಿದ್ದಾರೆ.