Friday, May 17, 2024
Google search engine
Homeತಾಜಾ ಸುದ್ದಿಸಲ್ಮಾನ್ ಖಾನ್ ನಿವಾಸದ ಮುಂದೆ ಗುಂಡು ಹಾರಿಸಿದ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆಗೆ ಯತ್ನ!

ಸಲ್ಮಾನ್ ಖಾನ್ ನಿವಾಸದ ಮುಂದೆ ಗುಂಡು ಹಾರಿಸಿದ ವ್ಯಕ್ತಿ ಜೈಲಲ್ಲಿ ಆತ್ಮಹತ್ಯೆಗೆ ಯತ್ನ!

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಎದುರು ಗುಂಡು ಹಾರಿಸಿದ ಪ್ರಕರಣದಲ್ಲಿ ಬಂಧಿಸಲಾದ ಆರೋಪಿಗಳ ಪೈಕಿ ಒಬ್ಬ ಜೈಲಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

32 ವರ್ಷದ ಅರ್ಜುನ್ ತಪಮಾನ್ ಎಂಬಾತ ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಏಪ್ರಿಲ್ 26ರಂದು ಪಂಜಾಬ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅರ್ಜುನ್ ತಪಮಾನ್, ಬುಧವಾರ ಬೆಳಿಗ್ಗೆ 11 ಗಂಟೆಗೆ ಟಾಯ್ಲೆಟ್ ಗೆ ಹೋಗುವ ನೆಪದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ಆರೋಪಿ ಜೊತೆ ಇನ್ನೂ 10 ಮಂದಿ ಒಂದೇ ಸೆಲ್ ನಲ್ಲಿ ಕೂಡಿ ಹಾಕಲಾಗಿದ್ದು, 5 ಪೊಲೀಸ್ ಸಿಬ್ಬಂದಿ ಭದ್ರತೆ ಇರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments