Sunday, June 16, 2024
Google search engine
Homeಜಿಲ್ಲಾ ಸುದ್ದಿಬಿಸಿಲು ತಡೆಯದೇ ರಸ್ತೆಯಲ್ಲೇ ಕುಸಿದುಬಿದ್ದ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್!

ಬಿಸಿಲು ತಡೆಯದೇ ರಸ್ತೆಯಲ್ಲೇ ಕುಸಿದುಬಿದ್ದ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್!

ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿರುವ ಕಲಬುರಗಿಯಲ್ಲಿ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ಬಿಸಿಲಿನ ಝಳ ತಾಳಲಾರದೇ ರಸ್ತೆಯಲ್ಲೇ ಕುಸಿದುಬಿದ್ದ ಘಟನೆ ಬುಧವಾರ ನಡೆದಿದೆ.

ಕಲಬುರಗಿಯಲ್ಲಿ ವಿರಶೈವ ಲಿಂಗಾಯತ ಸಮುದಾಯದಿಂದ ಪ್ರತಿಭಟನೆ ನಡೆಯುತ್ತಿದ್ದ ಜಾಗಕ್ಕೆ ಭೇಟಿ ನೀಡಿದ್ದ ಉಮೇಶ್ ಜಾಧವ್, ಬಿಸಿಲಿನ ತಾಪಕ್ಕೆ ತಲೆಸುತ್ತು ಬಂದು ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದಾರೆ.

ಜಾಧವ್ ಅವರನ್ನು ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನಂತರ ಮನೆಗೆ ಕಳುಹಿಸಿಕೊಡಲಾಗಿದೆ.

ಇದಕ್ಕೂ ಮುನ್ನ ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಾಧವ್‌, ಕಲಬುರಗಿಯಲ್ಲಿ ಲಾ ಆಂಡ್ ಸಂಪೂರ್ಣವಾಗಿ ಸತ್ತು ಹೋಗಿದೆ. ರಾಮ ಮಂದಿರ ಉದ್ಘಾಟನೆ ಮರುದಿನ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಆಗಿತ್ತು. ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳಿಗೆ ನಿನ್ನೆ ಜಾಮೀನು ಮಂಜೂರು ಆಗಿದೆ. ಜಾಮೀನಿನ ಮೇಲೆ ಹೊರ ಬಂದ ಆರೋಪಿಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ ಎಂದಿದ್ದರು.

ಜನವರಿ 23 ರಂದು ಕಲಬುರಗಿ ಬಂದ್ ಮಾಡಿ ಭಯದ ವಾತಾವರಣ ಸೃಷ್ಟಿ ಮಾಡಿದ್ರು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಆದರೆ ಅಂದು ಗಲಾಟೆ ಮಾಡಿದ ಆರೋಪಿಗಳ ಮೇಲೆ ಕ್ರಮ ಕೈಗೊಂಡಿಲ್ಲ. ಪ್ರಿಯಾಂಕ್ ಖರ್ಗೆ ಡಿಕ್ಟೇರ್ ಶಿಪ್ ಮಾಡ್ತಿದ್ದಾರೆ. ಡಿಎನ್ ಎ ಟೆಸ್ಟ್ ಮಾಡಿಸ್ತಾರಂತೆ , ಮೊದಲು ನಿಮ್ಮದು ಡಿಎನ್ ಎ ಟೆಸ್ಟ್ ಮಾಡಿಸಬೇಕು.

ನಾವು ಒಬ್ಬ ಸಾಮಾನ್ಯ ದಲಿತ ಕಾರ್ಯಕರ್ತನಿಗೆ ಟಿಕೆಟ್ ಕೊಡಬೇಕಾಗಿತ್ತು ಅಂತಾ ನಾವು ಹೇಳಿದ್ದೀವಿ. ಒಂದು ಸುಳ್ಳನ್ನ ನೂರು ಸಲ ಹೇಳಿ ಪ್ರಿಯಾಂಕ್ ಖರ್ಗೆ ಸತ್ಯ ಮಾಡೋದಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments