Friday, May 17, 2024
Google search engine
Homeಕ್ರೀಡೆಟಿ-20 ವಿಶ್ವಕಪ್: ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಆಸ್ಟ್ರೇಲಿಯಾ

ಟಿ-20 ವಿಶ್ವಕಪ್: ಸ್ಟಾರ್ ಆಟಗಾರರನ್ನೇ ಕೈಬಿಟ್ಟ ಆಸ್ಟ್ರೇಲಿಯಾ

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಟಿ-20 ವಿಶ್ವಕಪ್ ಗೆ ಪ್ರಕಟಿಸಿದ 15 ಸದಸ್ಯರ ತಂಡದಿಂದ ಪ್ರಮುಖ ಆಟಗಾರರನ್ನೇ ಕೈ ಬಿಟ್ಟು ಅಚ್ಚರಿ ಮೂಡಿಸಿದೆ.

ಹಿರಿಯ ಆಟಗಾರ ಸ್ಟೀವನ್ ಸ್ಮಿತ್, ಜಾಕ್ ಫ್ರೇಸರ್ ಮೆಕ್ ಗುರ್ಕ್, ಅನುಭವಿ ವೇಗಿ ಜೇಸನ್ ಬೆಹಂಡ್ರಾಫ್ ಮತ್ತು ಆಲ್ ರೌಂಡರ್ ಮ್ಯಾಟ್ ಶ್ರಾಟ್ ಅವರನ್ನು ಆಸ್ಟ್ರೇಲಿಯಾ ಟಿ-20 ತಂಡಕ್ಕೆ ಪರಿಗಣಿಸಲಾಗಿಲ್ಲ.

ಎಡಗೈ ಆಫ್ ಸ್ಪಿನ್ನರ್ ಆಸ್ಟನ್ ಆಗರ್, ಐಪಿಎಲ್ ನಲ್ಲಿ ಮಿಂಚುತ್ತಿರುವ ಮಾರ್ಕೂಸ್ ಸ್ಟೋನಿಸಿಸ್, ಟ್ರಾವಿಸ್ ಹೆಡ್ ಮತ್ತು ಕೆಮರೂನ್ ಗ್ರೀನ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಆಲ್ ರೌಂಡರ್ ಮಿಚೆಲ್ ಮಾರ್ಷ್ ತಂಡದ ಸಾರಥ್ಯ ವಹಿಸಿದ್ದಾರೆ.

ಆಸ್ಟ್ರೇಲಿಯಾ ಟಿ-20 ತಂಡ:

ಮಿಚೆಲ್ ಮಾರ್ಷ್ (ನಾಯಕ), ಆಸ್ಟನ್ ಅಗರ್, ಪ್ಯಾಟ್ ಕಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕೆಮರೂನ್ ಗ್ರೀನ್, ಜೋಷ್ ಹ್ಯಾಜ್ಲೆವುಡ್, ಟ್ರಾವಿಡ್ ಹೆಡ್, ಜಾನ್ ಇಗ್ನಿಸ್, ಗ್ಲೆನ್ ಮ್ಯಾಕ್ಸ್ ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕೂಸ್ ಸ್ಟೋನಿಸಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆಡಂ ಜಾಂಪ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments