ಪುಷ್ಪಕ್ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಏಕಾಏಕಿ ರೈಲಿನಿಂದ ಇಳಿದು ಪಕ್ಕದ ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಮತ್ತೊಂದು ರೈಲು ಹರಿದ ಪರಿಣಾಮ ಹಲವಾರು ಮಂದಿ ಮೃತಪಟ್ಟ ದಾರುಣ ಘಟನೆ ಮಹಾಹಾರಾಷ್ಟ್ರದಲ್ಲಿ ಸಂಭವಿಸಿದೆ.
ಪರಾಂಡ ರೈಲು ನಿಲ್ದಾಣದ ಬಳಿ ಬುಧವಾರ ಸಂಜೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿತು. ಇದರಿಂದ ಬೆಚ್ಚಿದ ಪ್ರಯಾಣಿಕರು ಏಕಾಏಕಿ ರೈಲಿನಿಂದ ಜಿಗಿದಿದ್ದಾರೆ.
ರೈಲಿನಿಂದ ಜಿಗಿದ ನೂರಾರು ಪ್ರಯಾಣಿಕರು ಖಾಲಿ ಇದ್ದ ಪಕ್ಕದ ಹಳಿಯ ಮೇಲೆ ಇದ್ದಾಗ ಏಕಾಏಕಿ ಬಂದ ಮತ್ತೊಂದು ಹಳಿ ಮೇಲೆ ಬಂದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹಳಿ ಮೇಲೆ ಇದ್ದವರ ಮೇಲೆ ಹರಿದು ಹಲವರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.