Thursday, 26 November 2026 — Kannadavahini
BREAKING NEWS
ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ ರಾಜ್ಯ ಮೈಸೂರಿನಲ್ಲಿ ನಾಳೆ ಬೃಹತ್ ಸಂವಿಧಾನ ಸಮಾವೇಶ: ಲಕ್ಷಕ್ಕೂ ಅಧಿಕ ಜನರು ಭಾಗಿ ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ
ದೇಶ

ಕುಂಭದ ಸುಳ್ಳು ಮಾಹಿತಿ: 53 ಸಾಮಾಜಿಕ ತಾಣಗಳು ಬಂದ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು 41 ವೀಕ್ಷಣೆಗಳು
kumba mela
kumba mela

ನವದೆಹಲಿ: ಮಹಾಕುಂಭ ಮೇಳದ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ 53 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

ನಕಲಿ ಸುದ್ದಿಗಳನ್ನು ನಿಗ್ರಹಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಹಳೆಯ ವೀಡಿಯೊಗಳು ಸೇರಿದಂತೆ ಅನೇಕ ದಾರಿತಪ್ಪಿಸುವ ಪೋಸ್ಟ್ಗಳನ್ನು ಗುರುತಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಿದ ಪೋಸ್ಟ್ಗಳ ಮೇಲ್ವಿಚಾರಣೆ ಮಾಡಲು ಮತ್ತು ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಪೊಲೀಸರು ಮತ್ತು ತಜ್ಞ ಸಂಸ್ಥೆಗಳಿಂದ ನಿರಂತರ ಸೈಬರ್ ಗಸ್ತು ನಡೆಸಲಾಗುತ್ತಿದೆ ಎಂದು ಡಿಜಿಪಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಫೆಬ್ರವರಿ 13 ರಂದು, ಸೈಬರ್ ಮೇಲ್ವಿಚಾರಣೆಯಲ್ಲಿ ಮಹಾ ಕುಂಭ ಮೇಳಕ್ಕೆ ತಪ್ಪಾಗಿ ಲಿಂಕ್ ಮಾಡಲಾದ ಎರಡು ದಾರಿತಪ್ಪಿಸುವ ವಿಡಿಯೋಗಳು ಪತ್ತೆಯಾಗಿವೆ.

ಈಜಿಪ್ಟಲ್ಲಿ ನಡೆದ ಬೆಂಕಿ ಅವಘಡದ ವಿಡಿಯೋವನ್ನು ಮಹಾಕುಂಭ ಬಸ್ ನಿಲ್ದಾಣದಲ್ಲಿ ಬೆಂಕಿ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದ್ದು, 40-50 ವಾಹನಗಳು ನಾಶವಾಗಿವೆ ಎಂದು ಹೇಳಲಾಗಿದೆ. ತನಿಖೆಯ ನಂತರ ಈ ದೃಶ್ಯಗಳು ವಾಸ್ತವವಾಗಿ ಕೈರೋದಲ್ಲಿ ಜುಲೈ 14, 2020ರಂದು ಸಂಭವಿಸಿದ ಅಗ್ನಿ ಅವಘಡದ ದೃಶ್ಯಗಳಾಗಿದ್ದವು ಎಂದು ಅವರು ತಿಳಿಸಿದ್ದಾರೆ.

ಪ್ರಯಾಗರಾಜ್ ಕುಂಭಮೇಳ ಆಡಳಿತ ಮತ್ತು ಉತ್ತರ ಪ್ರದೇಶ ಪೊಲೀಸರು ತಪ್ಪು ಮಾಹಿತಿಯನ್ನು ಹರಡಲು ಕಾರಣರಾದ ಹಲವು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8446 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment