Wednesday, 25 November 2026 — Kannadavahini
BREAKING NEWS
ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ? ವಿದೇಶ ಭಾರತದ ಮೇಲೆ ಅಮೆರಿಕದಿಂದ ಹೆಚ್ಚುವರಿ ಸುಂಕ ಹೇರಿಕೆ? ದೇಶ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಕ್ಲೀನ್ ಚಿಟ್ ಅಪರಾಧ ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್! ಕಾನೂನು ಬಸವ ಮಂಟಪ ಲೇಖಕ ರವಿ ಹಂಜ್‌ಗೆ ನಿರೀಕ್ಷಣಾ ಜಾಮೀನು ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತೊಬ್ಬ ಸಾಕ್ಷಿ ಉಲ್ಟಾ  ಪ್ರಾಸಿಕ್ಯೂಷನ್‌ಗೆ ಹಿನ್ನಡೆ ರಾಜ್ಯ ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾಪಂ, ಜಿಪಂ ಚುನಾವಣೆ? ರಾಜ್ಯ ಮಾನವ-ಆನೆ ಸಂಘರ್ಷಕ್ಕೆ `ಆನೆಧಾಮ’ ಪರಿಹಾರ: ಸಚಿವ ಈಶ್ವರ ಖಂಡ್ರೆ ವಿಶೇಷ ಧರೆಗಿಳಿದ ಗಗನಕ್ಕೇರಿದ್ದ ಬಂಗಾರ: ಮೋದಿ ಮಾತಿಗೆ ಕುಸಿಯಿತಾ ಚಿನ್ನದ ಬೆಲೆ?
ಅಪರಾಧ

ಕೆಪಿಎಸ್ ಸಿ ಹಗರಣ: 15 ಅಭ್ಯರ್ಥಿಗಳ ಜೊತೆ ಡೀಲ್!

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 5 ವೀಕ್ಷಣೆಗಳು
kpsc scam

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ವಿಶೇಷ ತನಿಖಾ ತಂಡ (ಎಸ್ ಐಟಿ) ಕೂಡ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

ಹಿಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ನಡೆಸಿದ್ದಾರೆ ಎನ್ನಲಾದ ಅಕ್ರಮಗಳು ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಅಭ್ಯರ್ಥಿಗಳಿಂದ ತಲಾ 40ರಿಂದ 80 ಲಕ್ಷ ರೂವರೆಗೆ ಹಣ ವಸೂಲಿ ಮಾಡಿರುವುದು, ಒಟ್ಟು 15 ಅಭ್ಯರ್ಥಿಗಳೊಂದಿಗೆ ಡೀಲ್ ಮಾಡಿಕೊಂಡಿರುವುದು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪ್ರಶ್ನೆಪತ್ರಿಕೆ ನೀಡಿ ಅಭ್ಯರ್ಥಿಗಳಿಗೆ ತರಬೇತಿ ನೀಡಿರುವ ಆರೋಪಗಳನ್ನು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಸಿಸಿಟಿವಿ ಇಲ್ಲದೆಡೆ ಸಂದರ್ಶನ:

ನೇಮಕಾತಿ ಅಕ್ರಮ ನಡೆಸುವ ಉದ್ದೇಶದಿಂದಲೇ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಸ್ಥಳಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಇಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪಶುವೈದ್ಯಾಧಿಕಾರಿ, ಜೂನಿಯರ್ ಎಂಜಿನಿಯರ್ (ಜೆಇ) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಂದರ್ಶನಗಳನ್ನು ಈ ರೀತಿಯ ಸ್ಥಳಗಳಲ್ಲಿ ನಡೆಸಲಾಗಿತ್ತು ಎಂಬ ಆರೋಪವಿದೆ.

ಹಿಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿರುವುದನ್ನೂ ಇಡಿ ಪತ್ತೆಹಚ್ಚಿದೆ. ಜ್ಞಾನೇಂದ್ರ ಅವರ ಅತ್ತಿಗೆಯ ಬ್ಯಾಂಕ್ ಖಾತೆಗೆ 15.39 ಲಕ್ಷ ರೂಪಾಯಿ ಹಾಗೂ ತಮ್ಮನ ಬ್ಯಾಂಕ್ ಖಾತೆಗೆ 10.94 ಲಕ್ಷ ರೂಪಾಯಿ ಜಮೆಯಾಗಿರುವುದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

3.20 ಕೋಟಿ ರೂ.ಗೆ ಬೇಡಿಕೆ:

ಪ್ರಶ್ನೆಪತ್ರಿಕೆ ಸೋರಿಕೆಗಾಗಿ 10 ಅಭ್ಯರ್ಥಿಗಳಿಂದ ಒಟ್ಟು 3.20 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು. ಈ ಪೈಕಿ 1.52 ಕೋಟಿ ರೂಪಾಯಿ ವಸೂಲಿ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಬ್ಯಾಂಕ್ ಖಾತೆಗಳ ಮೂಲಕ 92 ಲಕ್ಷ ರೂಪಾಯಿ ಹಾಗೂ ನಗದು ರೂಪದಲ್ಲಿ 60 ಲಕ್ಷ ರೂಪಾಯಿ ಸ್ವೀಕರಿಸಲಾಗಿತ್ತು ಎನ್ನಲಾಗಿದೆ.

ಪರೀಕ್ಷೆಗೆ ಒಂದು ದಿನ ಮೊದಲು ಬೆಂಗಳೂರಿನ ಹೊರವಲಯದಲ್ಲಿರುವ ವಿಲ್ಲಾಗಳಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಯ ಪ್ರಿಂಟ್‌ಔಟ್‌ಗಳನ್ನು ನೀಡಲಾಗಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರು ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ನೀಡುವುದು ಹಾಗೂ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸುವುದಾಗಿ ಡೀಲ್ ಮಾಡಿಕೊಂಡಿರುವ ಆರೋಪವೂ ಇದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8445 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment