ಕ್ರಿಕೆಟ್ ಆಡುವಾಗ ಮರ್ಮಾಂಗಕ್ಕೆ ಚೆಂಡು ಬಿದ್ದು 11 ವರ್ಷದ ಬಾಲಕ ಮೃತಪಟ್ಟ ಘಟನೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೃತಪಟ್ಟ ಬಾಲಕ ಶೌರ್ಯ ಬೌಲಿಂಗ್ ಮಾಡುತ್ತಿದ್ದು, ಬ್ಯಾಟ್ಸ್ ಮನ್ ಬಲವಾಗಿ ಬಾರಿಸಿದ ಚೆಂಡು ಶೌರ್ಯನ ಖಾಸಗಿ ಭಾಗಕ್ಕೆ ಬಿದ್ದಿದೆ. ನೋವು ತಡೆಯಲಾರದೇ ಕೂಡಲೇ ಮೈದಾನದಲ್ಲೇ ಕುಸಿದುಬಿದ್ದಿದ್ದಾನೆ.
ಸ್ನೇಹಿತರು ಕೂಡಲೇ ಬಿದ್ದ ಶೌರ್ಯನ ಬಳಿ ದೌಡಾಯಿಸಿದ್ದಾರೆ. ಒಬ್ಬಾತ ಶೌರ್ಯನನ್ನು ರಕ್ಷಿಸಲು ಪ್ರಯತ್ನಿಸಿದ್ದಾನೆ. ಅಲ್ಲದೇ ಕೂಡಲೇ ಆಸ್ಪತ್ರೆಗೂ ಕರೆದೊಯ್ಯಲಾಗಿದೆ. ಆದರೆ ದಾರಿಮಧ್ಯದಲ್ಲೇ ಬಾಲಕ ಉಸಿರು ಚೆಲ್ಲಿದ್ದಾನೆ.