ಕೇಂದ್ರ ಸರ್ಕಾರ ಸಂಸದರ ವೇತನ ಹಾಗೂ ಮಾಜಿ ಸಂಸದರ ಪಿಂಚಣಿ ಮೊತ್ತದಲ್ಲಿ ಶೇ.24ರಷ್ಟು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಸರ್ಕಾರ ಮಾಡಿರುವ ಸಂಸದರು ಮತ್ತು ಮಾಜಿ ಸಂಸದರ ವೇತನ ಪರಿಷ್ಕರಣೆ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಪ್ರಸ್ತುತ ಮಾಸಿಕ 1 ಲಕ್ಷ ರೂ. ವೇತನ 1.24 ಲಕ್ಷ ರೂ.ಗೆ ಏರಿಕೆಯಾಗಲಿದೆ. ಮಾಜಿ ಸಂಸದರ ಪಿಂಚಣಿ 24 ಸಾವಿರ ರೂ.ನಿಂದ 30 ಸಾವಿರ ರೂ.ಗೆ ಏರಿಕೆಯಾಗಲಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವಾಲಯ ಸೋಮವಾರ ವೇತನ ಹೆಚ್ಚಳದ ಜೊತೆಗೆ ಸಂಸತ್ ಕಲಾಪದಲ್ಲಿ ಭಾಗಿಯಾಗಲು ನೀಡುವ ಗೌರವಧನ ಹಾಗೂ ಮಾಜಿ ಸಂಸದರ ಪಿಂಚಣಿಯಲ್ಲೂ ಹೆಚ್ಚಳ ಮಾಡಿರುವುದನ್ನು ಪ್ರಕಟಿಸಿದೆ.
ಸಂಸತ್ ಕಲಾಪದಲ್ಲಿ ಭಾಗಿಯಾದರೆ ನೀಡುತ್ತಿದ್ದ ಗೌರವಧನವನ್ನು 2000 ರೂ. ನಿಂದ 2500 ರೂ.ಗೆ ಹೆಚ್ಚಿಸಲಾಗಿದೆ. ಪಿಂಚಣಿ ಮೊತ್ತವನ್ನು 25 ಸಾವಿರ ರೂ.ನಿಂದ 31 ಸಾವಿರ ರೂ.ಗೆ ಏರಿಸಲಾಗಿದೆ. ಅಲ್ಲದೇ 5 ವರ್ಷಕ್ಕಿಂತ ಹೆಚ್ಚಿನ ಅವಧಿ ವರೆಗೆ ಸಂಸದರಾಗಿ ಸೇವೆ ಸಲ್ಲಿಸಿದವರಿಗೆ 2000 ರೂ.ನಿಂದ 2500 ರೂ. ಹೆಚ್ಚುವರಿ ಏರಿಕೆ ಮಾಡುವುದಾಗಿ ಪ್ರಕಟಿಸಿತು.



