Monday, June 1, 2026
Google search engine
Homeಮನರಂಜನೆದೇಶಭಕ್ತಿ ಚಿತ್ರಗಳ ಸರದಾರ ಮನೋಜ್ ಕುಮಾರ್ ಇನ್ನಿಲ್ಲ

ದೇಶಭಕ್ತಿ ಚಿತ್ರಗಳ ಸರದಾರ ಮನೋಜ್ ಕುಮಾರ್ ಇನ್ನಿಲ್ಲ

ಮುಂಬೈ:ದೇಶಭಕ್ತಿ ಚಿತ್ರಗಳ ನಿರ್ದೇಶಕ ಹಾಗೂ ಖ್ಯಾತ ಮನೋಜ್ ಕುಮಾರ್ 87ನೇ ವಯಸ್ಸಿನಲ್ಲಿ ಮುಂಬೈನ ಕೋಕಿಲಾಬೆನ್ ಧೀರುಭಾಯಿ ಅಂಬಾನಿ ಆಸ್ಪತ್ರೆಯಲ್ಲಿ (ಏಪ್ರಿಲ್ 4, 2025) ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಮನೋಜ್ ಕುಮಾರ್ ಮೂಲ ಹೆಸರು ಹರಿಕೃಷ್ಣ ಗಿರಿ ಗೋಸ್ವಾಮಿ. 1937ರ ಜುಲೈ 24ರಂದು ಪಾಕಿಸ್ತಾನದ ಅಬೊಟ್ಟಾಬಾದ್‌ನಲ್ಲಿ ಜನಿಸಿದರು. ಭಾರತ ವಿಭಜನೆಯ ನಂತರ ಕುಟುಂಬದೊಂದಿಗೆ ದೆಹಲಿಗೆ ವಲಸೆ ಬಂದ ಅವರು, ಹಿಂದೂ ಕಾಲೇಜಿನಲ್ಲಿ ಬಿಎ ಪದವಿ ಪಡೆದ ನಂತರ, ಚಿತ್ರರಂಗದಲ್ಲಿ ತಮ್ಮ ಕೈಚಳಕವನ್ನು ಆರಂಭಿಸಿದರು.

1965ರಲ್ಲಿ ಬಿಡುಗಡೆಯಾದ ‘ಶಹೀದ್’, 1967ರ ‘ಉಪ್ಕಾರ್’, 1970ರ ‘ಪೂರ್ವ್ ಔರ್ ಪಶ್ಚಿಮ್’ ಮುಂತಾದ ದೇಶಭಕ್ತಿಯ ಚಿತ್ರಗಳ ಮೂಲಕ ಅವರು ‘ಭಾರತ್ ಕುಮಾರ್’ ಎಂಬ ಬಿರುದನ್ನು ಪಡೆದರು.

‘ಹರಿಯಾಲಿ ಔರ್ ರಾಸ್ತಾ’, ‘ವೋ ಕೌನ್ ಥಿ’, ‘ಹಿಮಾಲಯಾ ಕಿ ಗೋಡ್ ಮೇನ್’, ‘ದೋ ಬದನ್’, ‘ಪತ್ತರ್ ಕೆ ಸನಮ್’, ‘ನೀಲ ಕಮಲ್’, ‘ಕ್ರಾಂತಿ’ ಮುಂತಾದ ಅವರ ಚಿತ್ರಗಳು ಜನಪ್ರಿಯತೆ ಪಡೆದವು. ಅವರು ನಟಿಸಿದ ಹಾಗೂ ನಿರ್ದೇಶಿಸಿದ ಬಹುತೇಕ ಚಿತ್ರಗಳು ದೇಶಭಕ್ತಿ ಚಿತ್ರಗಳಾಗಿದ್ದೂ ಮಾತ್ರವಲ್ಲದೇ ಸೂಪರ್ ಹಿಟ್ ಆಗಿದ್ದವು.

ಚಿತ್ರರಂಗಕ್ಕೆ ನೀಡಿದ ಸೇವೆಗಾಗಿ 1992ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಅವರು ಪಡೆದರು.

ಮನೋಜ್ ಕುಮಾರ್ ನಿಧನಕ್ಕೆ ಬಾಲಿವುಡ್ ಕಲಾವಿದರು, ರಾಜಕೀಯ ನಾಯಕರು ಮತ್ತು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಪುತ್ರ ಕುನಾಲ್ ಗೋಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ಸಂತಾಪ ಸಂದೇಶಕ್ಕೆ ಧನ್ಯವಾದ ತಿಳಿಸಿದ್ದಾರೆ.

ಮನೋಜ್ ಕುಮಾರ್ ಅವರ ಅಂತ್ಯಕ್ರಿಯೆ ಏಪ್ರಿಲ್ 5, 2025ರಂದು ಮುಂಬೈನ ಪವನ್ ಹನ್ಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments