ಅತ್ಯಧಿಕ ಸಕ್ಕರೆ, ಉಪ್ಪು ಮತ್ತು ಬೊಜ್ಜಿಗೆ ಕಾರಣವಾಗುವ ಅಂಶಗಳನ್ನು ಬಳಿಸಿ ಮನೆಯಲ್ಲಿ ಮಾಡಿದ ಅಡುಗೆಯೂ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ಭಾರತೀಯ ಮೆಡಿಕಲ್ ಅಂಡ್ ರಿಸರ್ಚ್ ಕೌನ್ಸಿಲ್ (ಐಸಿಎಂಆರ್) ವರದಿ ಎಚ್ಚರಿಸಿದೆ.
ಐಸಿಎಂಆರ್ ಕಳೆದ ವಾರ ಭಾರತೀಯರ ಉತ್ತಮ ಗುಣಮಟ್ಟದ ಆರೋಗ್ಯಕ್ಕಾಗಿ 16 ಅಂಶಗಳ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಮನೆಯಲ್ಲಿ ಮಾಡುವ ಅಡುಗೆಗೆ ಬಳಸುವ ಪದಾರ್ಥಗಳು ಆರೋಗ್ಯಕಾರಿಯೋ ಅಥವಾ ಅನಾರೋಗ್ಯಕಾರಿಯೋ ಎಂಬುದನ್ನು ತಿಳಿಸುತ್ತದೆ ಎಂದು ಹೇಳಿದೆ.
ಮನೆಯಲ್ಲಿ ಸಿದ್ಧಪಡಿಸಿದ ಊಟ ಮುಂತಾದ ಆಹಾರ ಪದಾರ್ಥಗಳಲ್ಲಿ ಬೊಜ್ಜು ಹೆಚ್ಚಿಸುವ ಅಂಶಗಳು ಹಾಗೂ ಸಕ್ಕರೆ ಮತ್ತು ಉಪ್ಪು ಎಷ್ಟು ಪ್ರಮಾಣದಲ್ಲಿ ಬಳಸುತ್ತಾರೆ ಎಂಬುದರ ಮೇಲೆ ಗುಣಮಟ್ಟವನ್ನು ಅಂದಾಜಿಸಬಹುದು ಎಂದು ವರದಿ ವಿವರಿಸಿದೆ.
ಸ್ವಚ್ಛತೆ ಇಲ್ಲದೇ ಇರುವುದು, ವಿಟಮಿನ್, ಕಬ್ಬಿಣದ ಅಂಶ ಆಹಾರದಲ್ಲಿ ಸೇರಿರಬೇಕು. ಅಲ್ಲದೇ ಅಮಿನೊ ಮುಂತಾದ ರಾಸಯನಿಕ ಬಳಸದ ಆಹಾರ ಉತ್ತಮ ಗುಣಮಟ್ಟದ್ದಾಗಿರುತ್ತದೆ ಎಂದು ಐಸಿಎಂಆರ್ ಹೇಳಿದೆ.
ಸಾಮಾನ್ಯವಾಗಿ ಅಡುಗೆ ಮಾಡುವಾಗ ಕೆಂಪಾಗಿ ಕಾಣಲಿ ಎಂಬ ಕಾರಣಕ್ಕೆ ಬಳಸುವ ಅನೆಮಿಯಾ ರಾಸಯಾನಿಕಗಳನ್ನು ಹೋಟೆಲ್ ಗಳಲ್ಲಿ ಬಳಸಲಾಗುತ್ತದೆ. ಇದು ಮನೆಯಲ್ಲಿ ಬಳಸುವುದಿಲ್ಲ. ಆದರೆ ಇದರ ಬಗ್ಗೆ ಮಾಹಿತಿ ಇಲ್ಲದೇ ಮನೆಯಲ್ಲೂ ಬಳಸಿದರೆ ಆರೋಗ್ಯಕ್ಕೆ ಹಾನಿ ಎಂದು ವರದಿ ವಿವರಿಸಿದೆ.
ಇದೇ ವರದಿಯಲ್ಲಿ ಊಟಕ್ಕೂ ಮುನ್ನ ಹಾಗೂ ನಂತರ ಚಹಾ ಮತ್ತು ಕಾಫಿ ಸೇವಿಸುವುದು ಆರೋಗ್ಯಕ್ಕೆ ಹಾನಿ ಎಂದು ಹೇಳಿತ್ತು. ಕಾಫಿ ಮತ್ತು ಟೀಯಲ್ಲಿ ಇರುವ ಕೆಫಿನ್ ಅಪಾಯಕಾರಿ. ಆದರೆ ಕಾಫಿ ಟೀ ಸೇವಿಸುವುದು ಅಪಾಯವಲ್ಲ ಎಂದು ಹೇಳಿದೆ.