Thursday, 29 October 2026 — Kannadavahini
BREAKING NEWS
Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್
ತಾಜಾ ಸುದ್ದಿ

ಸಮುದ್ರ ಮಟ್ಟ ಏರಿಕೆಯಿಂದ ಬ್ಯಾಂಕಾಕ್ ಮುಳುಗಡೆ: ತಜ್ಞರ ಎಚ್ಚರಿಕೆ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
1 ನಿಮಿಷ ಓದು 1 ವೀಕ್ಷಣೆಗಳು

ಸಮುದ್ರ ಮಟ್ಟದಲ್ಲಿ ಏರುತ್ತಿರುವುದರಿಂದ ಶೀಘ‍್ರದಲ್ಲೇ ಬ್ಯಾಂಕಾಕ್ ಮುಳುಗಡೆ ಆಗಲಿದ್ದು, ಪರ್ಯಾಯ ಥಾಯ್ಲೆಂಡ್ ಪರ್ಯಾಯ ರಾಜಧಾನಿಯತ್ತ ಗಮನಹರಿಸಬೇಕಾಗಿದೆ ಎಂದು ಭೂವಿಜ್ಞಾನ ತಜ್ಞರು ಎಚ್ಚರಿಸಿದ್ದಾರೆ.

ಹವಾಮಾನ ವೈಪರಿತ್ಯದಿಂದ ಈ ಶತಮಾನದ ಅಂತ್ಯದ ವೇಳೆಗೆ ಸಮುದ್ರ ಮಟ್ಟದಲ್ಲಿರುವ ಬ್ಯಾಂಕಾಕ್ ಮುಳುಗಡೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಸ್ಥಳಾಂತರ ಮಾಡಲು ಚಿಂತನೆ ನಡೆದಿದೆ ಎಂದು ಥಾಯ್ಲೆಂಡ್ ನ  ಹವಾಮಾನ ಬದಲಾವಣೆ ಅಧಿಕಾರಿ ತಿಳಿಸಿದ್ದಾರೆ.

ಬ್ಯಾಂಕಾಕ್ ಈಗಾಗಲೇ ಭಾರೀ ಮಳೆಯಿಂದ ಪದೇಪದೆ ಉದ್ಭವಾಗುತ್ತಿರುವ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ಪ್ರಸ್ತುತ ಜಗತ್ತು ಹೆಚ್ಚು ಹವಾಮಾನ ವೈಪರಿತ್ಯಗಳನ್ನು ಎದುರಿಸುತ್ತಿದ್ದು, ಬ್ಯಾಂಕಾಕ್ ಕೂಡ ಇದರಿಂದ ಹೊರತಾಗಿಲ್ಲ ಎಂದು ಸರ್ಕಾರದ ಹವಾಮಾನ ಬದಲಾವಣೆ ಇಲಾಖೆಯ ಪ್ರಧಾನ ನಿರ್ದೇಶಕ ಪವಿಚ್ ಕೆಸವವಾಂಗ್ ವಿವರಿಸಿದ್ದಾರೆ.

ಬ್ಯಾಂಕಾಕ್ ನಲ್ಲಿ ಈಗಾಗಲೇ ಸಾಮಾನ್ಯಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿದೆ. ಹೊಸ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಲೇಬೇಕಾಗಿದೆ. ಪ್ರಸ್ತುತ ಬ್ಯಾಂಕಾಕ್ ಈಗಾಗಲೇ ಬಹುತೇಕ ಮುಳುಗಡೆ ಆಗಿದೆ. ನಾವು ಶೀಘ್ರದಲ್ಲೇ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಹಾಲೆಂಡ್ ಮಾದರಿಯಲ್ಲಿ ನಾವು ಕೊಳವೆ ಕೊರೆಸುವುದು ಸೇರಿದಂತೆ ಹಲವು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದೇವೆ. ಆದರೆ ಅಂತಿಮವಾಗಿ ನಾವು ಬೇರೊಂದು ರಾಜಧಾನಿ ನಿರ್ಮಿಸಿ ಅಲ್ಲಿಗೆ ಸ್ಥಳಾಂತರ ಆಗುವುದು ಉತ್ತಮವಾಗಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8392 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment