ಭದ್ರತಾ ಪಡೆಗಳು ಸಮರಾಭ್ಯಾಸದ ಅಣಕು ಪ್ರದರ್ಶನ ನಡೆಸುವಂತೆ ಹಲವು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದು 1971ರ ನಂತರ ಇದೇ ಮೊದಲ ಬಾರಿ ಕೇಂದ್ರದಿಂದ ಈ ಸೂಚನೆ ಬಂದಿದೆ.
ಪೆಹಲ್ಗಾಮ್ ದಾಳಿ ನಂತರ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಭಾರತ ಸಿದ್ಧತೆ ನಡೆಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಲವು ಸಿದ್ಧತೆಗಳು ನಡೆಸಿರುವ ಬೆನ್ನಲ್ಲೇ ರಾಜ್ಯಗಳಿಗೆ ಭದ್ರತಾ ಪಡೆಗಳು ಅಣಕು ಪ್ರದರ್ಶನ ನಡೆಸುವಂತೆ ಸೂಚಿಸಿದೆ.
ದಾಳಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪರಿಣಾಮಕಾರಿ ಅಣಕು ಪ್ರದರ್ಶನ ನಡೆಸುವಂತೆ ಮೇ 7ರಂದು ಹೊರಡಿಸಿದ ಆದೇಶದಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
1971ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಇದೇ ರೀತಿ ರಾಜ್ಯಗಳು ಅಣಕು ಪ್ರದರ್ಶನ ನಡೆಸಲಾಗಿತ್ತು.
ಈ ಬಾರಿ ಅಣಕು ಪ್ರದರ್ಶನದ ವೇಳೆ ಗಮನಿಸಬೇಕಾದ ಅಂಶಗಳ ಪಟ್ಟಿ ನೀಡಲಾಗಿದ್ದು, ಅವುಗಳ ವಿವರ ಹೀಗಿದೆ.
ವಾಯು ದಾಳಿ ನಡೆದಾಗ
ದಾಳಿ ನಡೆದ ಸಂದರ್ಭದಲ್ಲಿ ಯುವಕರು ಹಾಗೂ ವಯಸ್ಕರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು
ಪ್ರಮುಖ ಸೇವೆಗಳು ನಿಂತಾಗ ಹಾಗೂ ಪೂರೈಕೆಯಲ್ಲಿ ವ್ಯತ್ಯಾಸವಾದಾಗ
ದೊಡ್ಡಮಟ್ಟದಲ್ಲಿ ಹಾನಿ ಸಂಭವಿಸಿದಾಗ
ದಾಳಿ ವೇಳೆ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರ ಮಾಡುವುದು ಹೇಗೆ?



