Monday, May 25, 2026
Google search engine
Homeರಾಜ್ಯಪಾಕಿಸ್ತಾನಕ್ಕೆ ವಿಳ್ಯದೆಲೆ ಪೂರೈಕೆ ಸ್ಥಗಿತಗೊಳಿಸಲು ಹೊನ್ನಾವರ ರೈತರ ನಿರ್ಧಾರ

ಪಾಕಿಸ್ತಾನಕ್ಕೆ ವಿಳ್ಯದೆಲೆ ಪೂರೈಕೆ ಸ್ಥಗಿತಗೊಳಿಸಲು ಹೊನ್ನಾವರ ರೈತರ ನಿರ್ಧಾರ

ಪಾಕಿಸ್ತಾನಕ್ಕೆ ಹಲವು ತಲೆಮಾರುಗಳಿಂದ ಪೂರೈಕೆಯಾಗುತ್ತಿದ್ದ ವೀಳ್ಯೆದೆಲೆಯ ಪೂರೈಕೆಯನ್ನು ನಿಲ್ಲಿಸಲು ಉತ್ತರ ಕರ್ನಾಟಕದ ಹೊನ್ನಾವರದ ರೈತರು ನಿರ್ಧರಿಸಿದ್ದಾರೆ.

ಪಹಲ್ಗಾಮ್​​ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್‌ ನಡೆಸಿ ತಕ್ಕ ಉತ್ತರ ನೀಡಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ರೈತರು ಉತ್ಪನ್ನಗಳನ್ನು ಟರ್ಕಿಗೆ ರಫ್ತು ಮಾಡುವುದಿಲ್ಲವೆಂದು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಹೊನ್ನಾವರದ ವೀಳ್ಯದೆಲೆ ಬೆಳೆಗಾರರು ಕೂಡ ಪಾಕಿಸ್ತಾನಕ್ಕೆ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರ ಭಾಗದ ರೈತರು ಬೆಳೆದ ವೀಳ್ಯದೆಲೆಯನ್ನು ದೆಹಲಿ ವರ್ತಕರು ಖರೀದಿಸಿ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು. ಇದು ಹಲವು ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ನಿರ್ಬಂಧ ವಿಧಿಸಿದ್ದರಿಂದ ಪಾಕಿಸ್ತಾನದಲ್ಲಿ ಬಹು ಬೇಡಿಕೆ ಇರುವ ಹೊನ್ನಾವರ ವೀಳ್ಯೆದೆಲೆಗೂ ಬಿಸಿ ತಾಗಿದೆ.

ಹೊನ್ನಾವರದಿಂದ ದೆಹಲಿಗೆ ತಲುಪುವ ವೀಳ್ಯದೆಲೆ ಅನ್ಯ ಮಾರ್ಗದಿಂದ ಪಾಕಿಸ್ತಾನಕ್ಕೆ ತೆರಳುತಿತ್ತು. ಪ್ರತಿ ದಿನ ಹೊನ್ನಾವರದಿಂದ 11 ಕ್ಕೂ ಹೆಚ್ಚು ಟನ್ ವೀಳ್ಯದೆಲೆ ದೆಹಲಿ ತಲುಪಿ ನಂತರ ಪಾಕಿಸ್ತಾನ ಸೇರುತ್ತಿತ್ತು. ಈಗ ಹೊನ್ನಾವರದ ರೈತರು ದೆಹಲಿಯ ವರ್ತಕರಿಗೆ ವೀಳ್ಯದೆಲೆ ಕಳುಹಿಸುವುದನ್ನೇ ನಿರ್ಬಂಧಿಸಿದ್ದಾರೆ. ಪಾಕಿಸ್ತಾನಕ್ಕೆ ಹೋಗುತಿದ್ದ ವೀಳ್ಯದೆಲೆ ಇದೀಗ ದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ದರ ಕುಸಿದರೂ ಪರವಾಗಿಲ್ಲ, ನಷ್ಟವನ್ನು ತಡೆದುಕೊಳ್ಳುತ್ತೇವೆ. ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಒಪ್ಪಲಾರೆವು. ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೆ ಶಾಶ್ವತವಾಗಿ ನಿರ್ಬಂಧ ವಿಧಿಸಿದ್ದೇವೆ ಎಂದು ರೈತರು ಹೇಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments