ಚೋಕರ್ಸ್ ಎಂದೇ ಕುಖ್ಯಾತಿ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ 27 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಂಡಿದ್ದೂ ಅಲ್ಲದೇ ಭಾರೀ ಮೊತ್ತದ ಬಹುಮಾನ ಜೇಬಿಗಿಳಿಸಿಕೊಂಡಿದೆ.
ಹೌದು, ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ದಕ್ಷಿಣ ಆಫ್ರಿಕಾ ತಂಡ 3.6 ದಶಲಕ್ಷ ಡಾಲರ್ ಅಂದರೆ ಸುಮಾರು 31.05 ಕೋಟಿ ರೂ. ಬಹುಮಾನ ಮೊತ್ತ ಗಳಿಸಿದೆ.
ಫೈನಲ್ ನಲ್ಲಿ ಸೋಲುಂಡು ರನ್ನರ್ ಅಪ್ ಸ್ಥಾನ ಪಡೆದರೂ ಆಸ್ಟ್ರೇಲಿಯಾ ತಂಡ 2.16 ದಶಲಕ್ಷ ಡಾಲರ್ ಅಂದರೆ 18.63 ಕೋಟಿ ರೂ. ಬಹುಮಾನ ಮೊತ್ತ ಗಳಿಸಲಿದೆ. ಮೂರನೇ ಸ್ಥಾನ ಪಡೆದ ತಂಡ 12.42 ಕೋಟಿ ರೂ. ಗಳಿಸಲಿದೆ.
ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ಐಸಿಸಿ ಟ್ರೋಫಿ ಗೆದ್ದ ಸಾಧನೆ ಮಾಡಿದೆ. ನಾಯಕ ಬವುಮಾ ಗಾಯದ ಮಧ್ಯೆಯೂ ಅರ್ಧಶತಕ ಬಾರಿಸಿ ಟೆಸ್ಟ್ ಗಳಲ್ಲಿ ದಾಖಲೆ ಗೆಲುವು ಸಾಧಿಸಿದರೆ, ಮರ್ಕರಂ ಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
1998ರಲ್ಲಿ ಐಸಿಸಿ ನಾಕೌಟ್ ಟ್ರೋಫಿ ಗೆದ್ದ ನಂತರ ದಕ್ಷಿಣ ಆಫ್ರಿಕಾ ಗೆದ್ದ ಮೊದಲ ಐಸಿಸಿ ಟ್ರೋಫಿ ಆಗಿದೆ. ಸದಾ ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್ ತಲುಪಿದರೂ ಪ್ರಶಸ್ತಿ ಗೆಲ್ಲುವಲ್ಲಿ ಎಡವಿ ಚೋಕರ್ಸ್ ಎಂಬ ಹಣೆಪಟ್ಟಿಗೆ ದ.ಆಫ್ರಿಕಾ ಪಾತ್ರವಾಗಿದೆ.



