ಯುದ್ಧಪೀಡಿತ ಇಸ್ರೇಲ್ ಮತ್ತು ಇರಾನ್ ನಿಂದ ಆಪರೇಷನ್ ಸಿಂಧು ಮೂಲಕ 4000ಕ್ಕೂ ಅಧಿಕ ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಯುದ್ಧದಿಂದ ಸಿಲುಕಿದ್ದ ಭಾರತೀಯರನ್ನು ಆಪರೇಷನ ಸಿಂಧು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.
ಇರಾನ್ ನಿಂದ ,3426 ಹಾಗೂ ಇಸ್ರೇಲ್ ನಿಂದ 818 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇರಾನ್ ನಲ್ಲಿ 10,000 ಹಾಗೂ ಇಸ್ರೇಲ್ ನಲ್ಲಿ 40,000 ಭಾರತೀಯರು ಸಿಲುಕಿದ್ದಾರೆ. ಇವರ ರಕ್ಷಣೆಗೆ ಭಾರತ ಮೇ 18ರಂದು ಆಪರೇಷನ್ ಸಿಂಧು ಕಾರ್ಯಾಚರಣೆ ಆರಂಭಿಸಿತು ಎಂದು ಸರ್ಕಾರ ವಿವರಿಸಿದೆ.
ಅಮರ್ನಿಯಾದಿಂದ ಒಂದು ವಿಮಾನ ಭಾರತೀಯರನ್ನು ಹೊತ್ತು ಆಗಮಿಸುತ್ತಿದೆ. ಇದರಲ್ಲಿ ಎಷ್ಟು ಜನರು ಬರುತ್ತಾರೆ ಎಂಬುದು ಗೊತ್ತಿಲ್ಲ. ಭಾರತಕ್ಕೆ ಬಂದಿಳಿದ ನಂತರ ಸ್ಪಷ್ಟ ಅಂಕಿ ಅಂಶ ತಿಳಿಯಲಿದೆ ಎಂದು ಜೈಶಂಕರ್ ವಿವರಿಸಿದರು.



