Saturday, October 5, 2024
Google search engine
Homeಕ್ರೀಡೆಐಪಿಎಲ್ ಎಲಿಮಿನೇಟರ್: ರಾಜಸ್ಥಾನ್ ಗೆ 173 ರನ್ ಗುರಿ ನೀಡಿದ ಆರ್ ಸಿಬಿ

ಐಪಿಎಲ್ ಎಲಿಮಿನೇಟರ್: ರಾಜಸ್ಥಾನ್ ಗೆ 173 ರನ್ ಗುರಿ ನೀಡಿದ ಆರ್ ಸಿಬಿ

ನಿಯಮಿತವಾಗಿ ವಿಕೆಟ್ ಕಳೆದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಗೆ ಗೆಲ್ಲಲು 173 ರನ್ ಸ್ಪರ್ಧಾತ್ಮಕ ಗುರಿ ನೀಡಿದೆ.

ಅಹಮದಾಬಾದ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್ ಸಿಬಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.

ರಾಜಸ್ಥಾನ್ ರಾಯಲ್ಸ್ ಶಿಸ್ತಿನ ದಾಳಿಗೆ ತತ್ತರಿಸಿದ ಆರ್ ಸಿಬಿ ರನ್ ಗಳಿಸಲು ಪರದಾಡಿದರು. ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ದಾಖಲಿಸಲು ವಿಫಲವಾಯಿತು.

ಆರ್ ಸಿಬಿ ಪರ ವಿರಾಟ್ ಕೊಹ್ಲಿ (33), ರಜತ್ ಪಟಿದಾರ್ (34), ಮಹಿಪಾಲ್ ಲೊಮ್ರೊರ್ (32) ಮತ್ತು ಕೆಮರೂನ್ ಗ್ರೀನ್ (27) ಮಾತ್ರ ಸ್ವಲ್ಪ ಮಟ್ಟಿಗೆ ನೆಲಕಚ್ಚಿ ಆಡಲು ಪ್ರಯತ್ನಿಸಿದರು.

ರಾಜಸ್ಥಾನ್ ಪರ ಆವೇಶ್ ಖಾನ್ 3, ಆರ್.ಅಶ್ವಿನ್ 2 ಮತ್ತು ಉಳಿದ ಮೂವರು ಬ್ಯಾಟ್ಸ್ ಮನ್ ಗಳು ತಲಾ 1 ವಿಕೆಟ್ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments