Saturday, May 23, 2026
Google search engine
Homeಕಾನೂನುಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 6 ತಿಂಗಳು ಶಿಕ್ಷೆ ಪ್ರಕಟ

ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 6 ತಿಂಗಳು ಶಿಕ್ಷೆ ಪ್ರಕಟ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (ಐಸಿಟಿ) ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಮೂತರ್ಿ ಮೊಹಮ್ಮದ್ ಗೋಲಮ್ ಮೊತರ್ುಜಾ ಮೊಜುಂದರ್ ನೇತೃತ್ವದ ಐಸಿಟಿ-1ರ ಮೂವರು ಸದಸ್ಯರ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.

ಕಳೆದ ವರ್ಷ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ, ಪದಚ್ಯುತ ಅವಾಮಿ ಲೀಗ್ ನಾಯಕಿ ಶೇಖ್ ಹಸೀನಾ ಅವರ ಫೋನ್ ಸಂಭಾಷಣೆಯ ಸೋರಿಕೆಯಾದ ಆಡಿಯೋ ಕ್ಲಿಪ್ನ್ನು ಪರಿಶೀಲಿಸಿದ ನಂತರ ಈ ತೀಪರ್ು ಬಂದಿದೆೆ.

ಆಡಿಯೋದಲ್ಲಿ, 72 ವರ್ಷದ ಹಸೀನಾ, ಮಾಜಿ ಗೋಬಿಂದಗಂಜ್ ಉಪಜಿಲಾ ಅಧ್ಯಕ್ಷ ಮತ್ತು ನಿಷೇಧಿತ ಬಾಂಗ್ಲಾದೇಶ ಛಾತ್ರ ಲೀಗ್ ನಾಯಕ ಶಕಿಲ್ ಅಕಾಂಡ್ ಬುಲ್ಬುಲ್ಗೆ, “ನನ್ನ ವಿರುದ್ಧ 227 ಪ್ರಕರಣಗಳು ದಾಖಲಾಗಿವೆ, ಆದ್ದರಿಂದ 227 ಜನರನ್ನು ಕೊಲ್ಲಲು ನನಗೆ ಪರವಾನಗಿ ಸಿಕ್ಕಿದೆ,” ಎಂದು ಹೇಳಿದ್ದಾರೆ ಎನ್ನಲಾಗಿದೆ.

ನ್ಯಾಯಮಂಡಳಿಯು ಈ ಹೇಳಿಕೆಯನ್ನು ನ್ಯಾಯಾಂಗ ನಿಂದನೆಯಾಗಿ ಮತ್ತು ನ್ಯಾಯಾಲಯದ ಅಧಿಕಾರವನ್ನು ದುರ್ಬಲಗೊಳಿಸುವ ಪ್ರಯತ್ನವೆಂದು ಪರಿಗಣಿಸಿದೆ. ಆಗಸ್ಟ್ 2024ರಲ್ಲಿ ಅಧಿಕಾರದಿಂದ ಕೆಳಗಿಳಿದ ಬಳಿಕ ಶೇಖ್ ಹಸೀನಾ ಅವರಿಗೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ಇದೇ ಮೊದಲ ಬಾರಿಗೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments