ಸುಮತ್ರಾ: ಇಂಡೊನೇಷ್ಯಾದಲ್ಲಿ ಒಂದೇ ದಿನ ಎರಡು ಬಾರಿ ಪ್ರಬಲ ಭೂಕಂಪನ ಸಂಭವಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಕನಿಷ್ಠ 38 ಮಂದಿ ಅಸುನೀಗಿದ್ದಾರೆ.
ಶನಿವಾರ ಮುಂಜಾನೆ ಇಂಡೋನೇಷ್ಯಾದ ಕರಾವಳಿ ಸುಮಾತ್ರದಲ್ಲಿ 7.7 ತೀವ್ರತೆಯ ಭೂಕಂಪನ ಸಂಭವಿಸಿತು. ಆದರೆ ಕೆಲವೇ ಗಂಟೆಗಳ ನಂತರ 6.9 ತೀವ್ರತೆಯ ಭೂಕಂಪನ ಸಂಭವಿಸಿದೆ.
ಮೊದಲ ಬಾರಿ ಭೂಕಂಪನ ಸಂಭವಿಸಿದಾಗ ಇಬ್ಬರು ಮೃತಪಟ್ಟಿದ್ದರು. ಆದರೆ ಎರಡನೇ ಬಾರಿ ಭೂಕಂಪನ ಸಂಭವಿಸಿದಾಗ 38 ಮಂದಿ ಅಸುನೀಗಿದ್ದಾರೆ ಎಂದು ಹೇಳಲಾಗಿದೆ.
ಮೊದಲ ಬಾರಿ ಭೂಕಂಪನ ಸಂಭವಿಸಿದ ಬೆನ್ನಲ್ಲೇ ಸುಮಾರು 2000 ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ. ಅಲ್ಲದೇ ಸುಮಾನಿ ಭೀತಿ ಉಂಟಾಗಿದ್ದು, ದುಷ್ಪರಿಣಾಮಗಳು ಮತ್ತಷ್ಟು ಹೆಚ್ಚುವ ಭೀತಿ ಇದೆ ಎಂದು ಭೂ ವಿಜ್ಞಾನಿಗಳು ಶಂಕಿಸಿದ್ದಾರೆ.



