ಸಾಮಾಜಿಕ ಕಾರ್ಯರ್ಕತೆ ಮೇಧಾ ಪಾಟ್ಕರ್ 24 ವರ್ಷ ಹಿಂದಿನ ಮಾನನಷ್ಟ ಮೊಕದ್ದಮೆಯಲ್ಲಿ ತಪ್ಪಿತಸ್ಥರು ಎಂದು ದೆಹಲಿ ನ್ಯಾಯಾಲಯ ಆದೇಶಿಸಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ 2000ರಲ್ಲಿ ದಾಖಲಿಸಿದ್ದ ಪ್ರಕರಣದಲ್ಲಿ ಮೇಧಾ ಪಾಟ್ಕರ್ ಗೆ ಹಿನ್ನಡೆ ಉಂಟಾಗಿದೆ.
ದೆಹಲಿ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮ ಶುಕ್ರವಾರ ನೀಡಿದ ತೀರ್ಪಿನಲ್ಲಿ ಮೇಧಾ ಪಾಟ್ಕರ್ ತಪ್ಪಿತಸ್ಥೆ ಎಂದು ಘೋಷಿಸಿದ್ದಾರೆ. ಮೇಧಾ ಪಾಟ್ಕರ್ ಗೆ ಶಿಕ್ಷೆ ಘೋಷಣೆ ಆಗಿಲ್ಲ. ನಿಯಮದ ಪ್ರಕಾರ 2 ವರ್ಷ ಜೈಲು ಅಥವಾ ದಂಡ ವಿಧಿಸುವ ಸಾಧ್ಯತೆ ಇದೆ.
ನರ್ಮದಾ ಬಚಾವೋ ಆಂದೋಲನ ಹಾಗೂ ತಮ್ಮ ವಿರುದ್ಧ ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದಕ್ಕಾಗಿ ಮೇಧಾ ಪಾಟ್ಕರ್ ನ್ಯಾಯಾಲಯದ ಮೆಟ್ಟಿಲೇರಿದ್ದರೆ, ತಮ್ಮ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಸಕ್ಸೇನಾ ಮೇಧಾ ಪಾಟ್ಕರ್ ವಿರುದ್ಧ ಎರಡು ಮಾನನಷ್ಟ ಮೊಕದ್ದಮೆ ಹೂಡಿದ್ದರು.