Sunday, June 28, 2026
Google search engine
Homeದೇಶಬೆಟ್ಟಿಂಗ್ ಅಪ್ಲಿಕೇಶನ್ ಹಗರಣ: ಗೂಗಲ್, ಮೆಟಾಗೆ ಇಡಿ ಸಮನ್ಸ್

ಬೆಟ್ಟಿಂಗ್ ಅಪ್ಲಿಕೇಶನ್ ಹಗರಣ: ಗೂಗಲ್, ಮೆಟಾಗೆ ಇಡಿ ಸಮನ್ಸ್

ನವದೆಹಲಿ: ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಆರೋಪದ ಕುರಿತು ನಡೆಯುತ್ತಿರುವ ಇಡಿಯು ಗೂಗಲ್ ಮತ್ತು ಮೆಟಾಗೆ ನೋಟಿಸ್ ಜಾರಿ ಮಾಡಿದ್ದು, ಜುಲೈ 21ರಂದು ದೆಹಲಿ ಪ್ರಧಾನ ಕಚೇರಿಯ ಮುಂದೆ ಹಾಜರಾಗುವಂತೆ ಎರಡೂ ಕಂಪನಿಗಳ ಪ್ರತಿನಿಧಿಗಳಿಗೆ ಸಮನ್ಸ್ ನೀಡಿದೆ.

ಮೂಲಗಳ ಪ್ರಕಾರ, “ಗೂಗಲ್ ಮತ್ತು ಮೆಟಾ ಪ್ಲಾಟ್‌ಫಾರ್ಮ್ಗಳು ಜಾಹೀರಾತುಗಳ ಮೂಲಕ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಿವೆ ಮತ್ತು ಬಳಕೆದಾರರಿಗೆ ಅವುಗಳ ವ್ಯಾಪ್ತಿಯನ್ನು ಸುಗಮಗೊಳಿಸುತ್ತಿವೆ.”

ಈ ಅಕ್ರಮ ಅಪ್ಲಿಕೇಶನ್‌ಗಳ ಪ್ರಚಾರವನ್ನು ಸಕ್ರಿಯಗೊಳಿಸುವಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ ಗಳ ಪಾತ್ರವನ್ನು ಸಂಸ್ಥೆ ಪರಿಶೀಲಿಸುತ್ತಿದೆ, ಇವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸಂಭಾವ್ಯ ಉಲ್ಲಂಘನೆಗಳಿಗಾಗಿ ಪರಿಶೀಲನೆಯಲ್ಲಿವೆ.

ಆನ್‌ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಮುಂಬೈನ ನಾಲ್ಕು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿ, ಲೆಕ್ಕವಿಲ್ಲದ 3.3 ಕೋಟಿ ರೂ. ನಗದು, ಐಷಾರಾಮಿ ಕೈಗಡಿಯಾರಗಳು, ಆಭರಣಗಳು, ವಿದೇಶಿ ಕರೆನ್ಸಿ ಮತ್ತು ಐಷಾರಾಮಿ ವಾಹನಗಳನ್ನು ವಶಪಡಿಸಿಕೊಂಡ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಶೋಧ ಕಾರ್ಯಾಚರಣೆಯ ಸಮಯದಲ್ಲಿ ನಗದು ಎಣಿಕೆ ಯಂತ್ರಗಳು ಸಹ ಪತ್ತೆಯಾಗಿವೆ.

ಅಕ್ರಮ ವ್ಯಾಪಾರ ಮತ್ತು ಬೆಟ್ಟಿಂಗ್ ವೇದಿಕೆಗಳಲ್ಲಿ ಭಾಗಿಯಾಗಿರುವ ‘ಡಬ್ಬಾ ಟ್ರೇಡಿಂಗ್ ಅಪ್ಲಿಕೇಶನ್’ಗಳಾದ ಗಿಒoಟಿeಥಿ, ಗಿಒ ಟ್ರೇಡಿಂಗ್, ಸ್ಟಾ÷್ಯಂಡರ್ಡ್ ಟ್ರೇಡ್ಸ್ ಲಿಮಿಟೆಡ್, ಐಬುಲ್ ಕ್ಯಾಪಿಟಲ್ ಲಿಮಿಟೆಡ್, ಲೋಟಸ್‌ಬುಕ್, 11ಸ್ಟಾರ್ಸ್ ಮತ್ತು ಗೇಮ್‌ಬೆಟ್‌ಲೀಗ್‌ಗಳ ಹಣಕಾಸು ಮತ್ತು ಕಾರ್ಯಾಚರಣೆಯ ಚಟುವಟಿಕೆಗಳನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ.

ಅಧಿಕಾರಿಗಳ ಪ್ರಕಾರ, ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ಗಳು ವೈಟ್-ಲೇಬಲ್ ಅಪ್ಲಿಕೇಶನ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ ಮತ್ತು ಲಾಭ ಹಂಚಿಕೆಯ ಆಧಾರದ ಮೇಲೆ ಅಡ್ಮಿನ್ ಹಕ್ಕುಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

“ಡಿಜಿಟಲ್ ಮತ್ತು ಹಣಕಾಸು ದಾಖಲೆಗಳೊಂದಿಗೆ ಗುರುತಿಸಲಾದ ಹವಾಲಾ ನಿರ್ವಾಹಕರು ಮತ್ತು ನಿಧಿ ನಿರ್ವಾಹಕರನ್ನು ಪರಿಶೀಲಿಸಲಾಗುತ್ತಿದೆ” ಎಂದು ಈ ಬೆಳವಣಿಗೆ ಬಗ್ಗೆ ತಿಳಿದಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಜನವರಿ ೯ರಂದು ಮಧ್ಯಪ್ರದೇಶದ ಇಂದೋರ್‌ನ ಲಸುಡಿಯಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಯ ಆಧಾರದ ಮೇಲೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ತನಿಖೆಯನ್ನು ಪ್ರಾರಂಭಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments