Thursday, May 14, 2026
Google search engine
Homeದೇಶಒಬ್ಬಳನ್ನೇ ಮದುವೆ ಆದ ಸೋದರರು: ಈ ಜನಾಂಗದಲ್ಲಿ ಇದು ಮಾಮೂಲು!

ಒಬ್ಬಳನ್ನೇ ಮದುವೆ ಆದ ಸೋದರರು: ಈ ಜನಾಂಗದಲ್ಲಿ ಇದು ಮಾಮೂಲು!

ನೂರಾರು ಜನರ ಸಾಕ್ಷಿಯಾಗಿ ಅಣ್ಣ- ತಮ್ಮ ಇಬ್ಬರೂ ಒಬ್ಬಳನ್ನೇ ಮದುವೆ ಆದ ಘಟನೆ ಹಿಮಾಚಲ ಪ್ರದೇಶದ ಸಿರುಮುರ್‌ ಜಿಲ್ಲೆಯ ಶಿಲ್ಲಾಯ್‌ ಗ್ರಾಮದಲ್ಲಿ ಹಟ್ಟಿ ಬುಡಕಟ್ಟು ಜನಾಂಗದಲ್ಲೀ ನಡೆದಿದೆ.

ಸುನೀತಾ ಚೌಹಾಣ್‌ ಎಂಬಾಕೆಯನ್ನು ಸೋದರರಾದ ಪ್ರದೀಪ್‌ ಮತ್ತು ಕಪಿಲ್‌ ನೇಗಿ ಇಬ್ಬರೂ ಯಾವುದೇ ಒತ್ತಡಕ್ಕೆ ಒಳಗಾಗದೇ ಸ್ವಯಂಪ್ರೇರಿತರಾಗಿ ಮದುವೆಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ವಿಶೇಷ ಅಂದರೆ ಇಲ್ಲಿನ ಬುಡಕಟ್ಟು ಸಮುದಾಯದ ಪ್ರಕಾರ ಬಹುಪತ್ನಿತ್ವ ಅಲ್ಲ ಬಹುಪತಿತ್ವ ಮಾಡಿಕೊಳ್ಳಬಹುದಾಗಿದೆ.

ಜುಲೈ 12ರಂದು ಮದುವೆ ಸಂಪ್ರದಾಯ ಆರಂಭವಾಗಿದ್ದು, ಹಾಡು, ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮಗಳ ಜೊತೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಗಳು ನಡೆದಿದೆ. ಇದೀಗ ಈ ಮದುವೆ ಕಾರ್ಯಕ್ರಮದ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇಲ್ಲಿನ ಬುಡಕಟ್ಟು ಸಮುದಾಯದ ʻಜೋಡಿದಾರʼ ಸಂಪ್ರದಾಯಿಕ ಮದುವೆಯನ್ನು ಹಿಮಾಚಲ ಪ್ರದೇಶ ಕಾನೂನು ಕೂಡ ಒಪ್ಪಿಕೊಂಡಿದೆ. ಕಳೆದ 6 ವರ್ಷಗಳಲ್ಲಿ ಇಂತಹ ಹಲವು ಮದುವೆಗಳು ನಡೆದಿವೆ ಎಂದು ಹೇಳಲಾಗಿದೆ.
ಕುನ್ಹತ್‌ ಗ್ರಾಮದ ನಿವಾಸಿಯಾಗಿರುವ ವಧು ಸುನೀತಾ, ಸಮುದಾಯದ ಸಂಪ್ರದಾಯವನ್ನು ಗೌರವಿಸುತ್ತಿದ್ದು, ಯಾವುದೇ ಒತ್ತಡವಿಲ್ಲದೇ ಈ ರೀತಿಯ ಮದುವೆಗೆ ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಶಿಲ್ಲಾಯ್ ಗ್ರಾಮದ ಪ್ರದೀಪ್‌ ಸರ್ಕಾರಿ ನೌಕರನಾಗಿದ್ದು, ಆತನ ಸೋದರ ಕಪಿಲ್‌ ವಿದೇಶದಲ್ಲಿ ನೌಕರಿ ಹೊಂದಿದ್ದಾನೆ. ನಾವು ಈ ಸಂಪ್ರದಾಯವನ್ನು ಗೌರವಿಸುತ್ತಿದ್ದು, ಇಬ್ಬರು ಸಹಮತದೊಂದಿಗೆ ಮದುವೆಗೆ ನಿರ್ಧರಿಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ ಗಡಿಗೆ ಹೊಂದಿಕೊಂಡಿರುವ ಹಟ್ಟಿ ಗ್ರಾಮವಾಗಿದ್ದು, ಇಲ್ಲಿನ ಸಮುದಾಯವನ್ನು ಬುಡಕಟ್ಟು ಜನಾಂಗ ಎಂದು ಮೂರು ವರ್ಷಗಳ ಹಿಂದೆ ಘೋಷಿಸಲಾಗಿತ್ತು. ಈ ಸಮುದಾಯದಲ್ಲಿ ಬಹುಪತಿತ್ವ ಜಾರಿಯಲ್ಲಿದೆ. ಆದರೆ ಮಹಿಳೆಯರು ಹಾಗೂ ಸಮುದಾಯದವರು ಶಿಕ್ಷಣ ಪಡೆದ ನಂತರ ಅರಿವು ಬಂದು ಈ ರೀತಿಯ ಮದುವೆಗಳಿಂದ ದೂರ ಉಳಿದ ಕಾರಣ ಅಲ್ಲೊಂದು ಇಲ್ಲೊಂದು ಈ ರೀತಿಯ ಮದುವೆಗಳು ನಡೆಯುತ್ತಿವೆ.

ಮಹಿಳೆಗಾಗಿ ಜಗಳ ನಡೆದು ಭೂಮಿ ಇಬ್ಬಾಗ ಆಗಬಾರದು ಎಂಬ ಕಾರಣಕ್ಕೆ ಈ ಸಮುದಾಯದಲ್ಲಿ ಬಹುಪತಿತ್ವ ತುಂಬಾ ಹಿಂದಿನ ಕಾಲದಿಂದಲೂ ಜಾರಿಯಲ್ಲಿದೆ ಎಂದು ಹೇಳಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments