Tuesday, June 30, 2026
Google search engine
Homeಅಪರಾಧಧರ್ಮಸ್ಥಳದಲ್ಲಿ ಗುಂಪು ಘರ್ಷಣೆ: 6 ಮಂದಿ ಅರೆಸ್ಟ್

ಧರ್ಮಸ್ಥಳದಲ್ಲಿ ಗುಂಪು ಘರ್ಷಣೆ: 6 ಮಂದಿ ಅರೆಸ್ಟ್

ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಶೋಧ ಕಾರ್ಯದ ವೇಳೆ ನಡೆದ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ ಉಜಿರೆಯ ಆಸ್ಪತ್ರೆ ಬಳಿ ನಡೆದ ಘರ್ಷಣೆ ಪ್ರಕರಣದಲ್ಲಿ ಸ್ಥಳೀಯರಾದ ಪದ್ಮಪ್ರಸಾದ್, ಸುಹಾಸ್, ಗುರುಪ್ರಸಾದ್, ಶಶಿಕುಮಾರ್, ಕಲಂದರ್, ಚೇತನ್ ಅವರನ್ನು ಬಂಧಿಸಲಾಗಿದೆ.

ಘರ್ಷಣೆ ಸಂದರ್ಭದಲ್ಲಿ ನಿಯಂತ್ರಣ ಮಾಡಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಪೊಲೀಸ್‌ ಅಧಿಕಾರಿಯಿಂದ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಆರೋಪಿಗಳನ್ನು ಹುಡುಕುತ್ತಿದ್ದರು. ಘರ್ಷಣೆ ವೇಳೆ ಮಾಧ್ಯಮ ವಾಹನಗಳ ಮೇಲೆ ಕೂಡ ಕಲ್ಲುತೂರಾಟ ನಡೆದಿತ್ತು ಎಂದು ವರದಿ ಆಗಿತ್ತು.

ಧರ್ಮಸ್ಥಳದಲ್ಲಿ ಘರ್ಷಣೆಗೆ ಸಂಬಂಧಿಸಿ ಧರ್ಮಸ್ಥಳ ಹಾಗೂ ಬೆಳ್ತಂಗಡಿ ಪೊಲೀಸ್‌ ಠಾಣೆಗಳಲ್ಲಿ ಒಟ್ಟಾರೆ ೭ ಪ್ರಕರಣಗಳು ದಾಖಲಾಗಿದ್ದು, ಗಿರೀಶ್‌ ಮಟ್ಟಣ್ಣನವರ್‌, ಸುವರ್ಣ ನ್ಯೂಸ್‌ ಆಂಕರ್‌ ಅಜಿತ್‌ ಹನುಮಕ್ಕನವರ್‌ ಸೇರಿದಂತೆ ೧೫೦ ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments