Sunday, June 28, 2026
Google search engine
Homeಮನರಂಜನೆಕಲ್ಕಿ 2898 ಎಡಿ-2 ಚಿತ್ರದಿಂದ ಹೊರಬಿದ್ದ ದೀಪಿಕಾ ಪಡುಕೋಣೆ!

ಕಲ್ಕಿ 2898 ಎಡಿ-2 ಚಿತ್ರದಿಂದ ಹೊರಬಿದ್ದ ದೀಪಿಕಾ ಪಡುಕೋಣೆ!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಲ್ಕಿ 2898 ಭಾಗ 2 ಚಿತ್ರದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಸ್ಟಾರ್ ನಟಿ ಪ್ರಭಾಸ್ ಅಭಿನಯದ ಸತತ ಎರಡು ಚಿತ್ರಗಳಿಂದ ಹೊರಬಿದ್ದಿದ್ದಾರೆ.

ಪ್ರಭಾಸ್ ಸೇರಿದಂತೆ ಸ್ಟಾರ್ ನಟ-ನಟಿಯರ ದಂಡೇ ಹೊಂದಿರುವ ಕಲ್ಕಿ 2898 ಚಿತ್ರದ ಸರಣಿಯ ಎರಡನೇ ಭಾಗದ ಚಿತ್ರದ ಬಗ್ಗೆ ತೀವ್ರ ಕುತೂಹಲ ಏರ್ಪಟ್ಟಿತ್ತು. ಆದರೆ ಕಲ್ಕಿ ಚಿತ್ರ ತಂಡ ಗುರುವಾರ ಕಲ್ಕಿ 2898-2 ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.

ಪ್ರಭಾಸ್ ಅಭಿನಯದ ಹಾಗೂ ಅನಿಮಲ್ ಚಿತ್ರದ ನಿರ್ದೇಶಕರ ಸ್ಪಿರಿಟ್ ಚಿತ್ರದಿಂದ ಹೊರಬಿದ್ದಿದ್ದ ದೀಪಿಕಾ ಪಡುಕೋಣೆ ಇದೀಗ ಕಲ್ಕಿ 2898-2 ಚಿತ್ರದಿಂದಲೂ ಹೊರಬಿದ್ದಿದ್ದಾರೆ.

ಕಲ್ಕಿ 2898-2 ಚಿತ್ರಕ್ಕೆ ಸಾಕಷ್ಟು ಬದ್ಧತೆ ಅಗತ್ಯವಿದೆ. ಈ ಸಮಯದಲ್ಲಿ ದೀಪಿಕಾ ತಮ್ಮ ಬದ್ದತೆ ತೋರುವುದು ಕಷ್ಟವಾಗಿದೆ. ಆದ್ದರಿಂದ ಚಿತ್ರದಿಂದ ಅವರನ್ನು ಕೈಬಿಡಲಾಗಿದೆ ಎಂದು ನಾಗ್ ಅಶ್ವಿನ್ ಘೋಷಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ ಕಲ್ಕಿ 2898 -2 ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಇತ್ತೀಚೆಗೆ ಸಂದರ್ಶನದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments