ನನ್ನ ಗಂಡ ಗಂಡಸಲ್ಲ, ಆತನಿಗೆ ಗಂಡಸ್ತನ ಇಲ್ಲ. ಅವನು ನಪುಂಸಕ ಎಂದು ಪತ್ನಿ 2 ಕೋಟಿ ರೂ.ಗೆ ಬೇಡಿಕೆ ಇಟ್ಟರೆ, ಪತ್ನಿಯ ಆರೋಪದಿಂದ ವಿಚಲಿತನಾದ ಪತಿ ಆಕೆಯ ವಿರುದ್ಧವೇ ದೂರು ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೇ 5ರಂದು ಚಿಕ್ಕಮಗಳೂರಿನ ಜಿಲ್ಲೆಯಲ್ಲಿ ಮದುವೆ ಆಗಿ ದಾಂಪತ್ಯಕ್ಕೆ ಕಾಲಿರಿಸಿದ್ದ ಜೋಡಿ ಮೂರೇ ತಿಂಗಳಿಗೆ ಬೇರೆ ಆಗಲು ನಿರ್ಧರಿಸಿದ್ದು, ಪತ್ನಿಯ ನಡವಳಿಕೆಯ ವಿರುದ್ಧ ಪತಿ ಹಾಗೂ ಅವರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದುವೆಯಾಗಿ ಹಲವು ತಿಂಗಳು ಕಳೆದರೂ ಸಹ ಸಂಸಾರ ನಡೆಸುತ್ತಿಲ್ಲ ಎನ್ನುವ ವಿಚಾರಕ್ಕೆ ಗಂಡ ಹೆಂಡ್ತಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ ಗಲಾಟೆ ಮಾಡಿಕೊಂಡಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವತಿ ಕಡೆಯವರು ಬೆಂಗಳೂರು ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣ ಕಿರುಕುಳ ದೂರು ನೀಡಿದ್ದರೆ, ಹುಡುಗನ ಕಡೆಯವರು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಯುವತಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 17 ರಂದು ಪ್ರವೀಣನ ಗೋವಿಂದರಾಜನಗರ ಮನೆಗೆ ನುಗ್ಗಿ ಪತ್ನಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಗಲಾಟೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರವೀಣ್, ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗಂಡ ಹಾಗೂ ಸಂಬಂಧಿಕರ ವಿರುದ್ಧ ಪಶ್ಚಿಮ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಕೇಸ್ ಕೂಡ ದಾಖಲಾಗಿದೆ. ಅಲ್ಲದೇ ಮದುವೆಯಾದ ಬಳಿಕ ಫಸ್ಟ್ ನೈಟ್ ನಲ್ಲಿ ಮುಟ್ಟಲು ಹಿಂದೇಟು ಹಾಕಿದ್ದಾನೆ ಎಂದು ಪತ್ನಿ ಆರೋಪ ಮಾಡಿದ್ದಾಳೆ.
ಪ್ರವೀಣ್ ಕಳೆದ ಮೇ5ರಂದು ತಿಂಗಳಲ್ಲಿ ಚಿಕ್ಕಮಗಳೂರು ಮೂಲದ ಯುವತಿಯನ್ನ ವಿವಾಹವಾಗಿದ್ದ. ಮದುವೆಯಾಗಿ ಫಸ್ಟ್‌ನೈಟ್ ವೇಳೆ ತನನ್ನು ಮುಟ್ಟಿಲ್ಲ. ಆತ ನಪುಂಸಕ ಎಂದು ಪತ್ನಿ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿ ಗಲಾಟೆ ಮಾಡಿದ್ದಾರೆಂದು ತಿಳಿದುಬಂದಿದೆ.
ಕೊನೆಗೆ ವಾದ ವಿವಾದ ಮುಗಿದು 2 ಕೋಟಿ ರೂ. ಬದಲು 65 ಲಕ್ಷ ರೂ.ಗೆ ರಾಜೀ ಪಂಚಾಯಿತಿ ನಡೆದಿದೆ ಎಂದು ತಿಳಿದು ಬಂದಿದೆ. ಆದರೆ ಪತಿ ಕಡೆಯವರು ಆಕೆ ಮಾಡಿದ ಆರೋಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಮದುವೆ ನೆಪದಲ್ಲಿ ಗಂಡನನ್ನು ಸುಲಿಗೆ ಮಾಡಲು ಯುವತಿ ಪ್ಲಾನ್ ಮಾಡಿದ್ದಾಳೆ. ಆಕೆಗೆ ಸಂಸಾರ ನಡೆಸುವುದು ಬೇಕಿರಲಿಲ್ಲ ಎಂದು ಆರೋಪಿಸಿದ್ದಾರೆ.



