ಡಾಕ್ಟರ್ ಆಗಲು ಇಷ್ಟವಿಲ್ಲ ಅಂತ ನೀಟ್ ಪರೀಕ್ಷೆಯಲ್ಲಿ ಶೇ.99.99 ಅಂಕ ಪಡೆದಿದ್ದ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಕಾಲೇಜಿಗೆ ದಾಖಲಾತಿ ಮಾಡಲು ಹೊರಡುವ ಹಿಂದಿನ ದಿನ ಅನುರಾಗ್ ಅನಿಲ್ ಬಾರ್ಕರ್, ನನಗೆ ವೈದ್ಯನಾಗಲು ಇಷ್ಟವಿಲ್ಲ ಅಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಂದ್ರಾಪುರ್ ಜಿಲ್ಲೆಯ ಶಿಂಧೆವಾಯಿ ತಾಲೂಕಿನ ನವರಂಗೊನ್ ನಗರದಲ್ಲಿ ಕುಟುಂಬದ ಜೊತೆ ವಾಸವಾಗಿದ್ದ ಅನುರಾಗ್ ಅನಿಲ್ ಬಾರ್ಕರ್ 2025ರ ನೀಟ್ ಪಿಜಿ ಪರೀಕ್ಷೆಯಲ್ಲಿ ಶೇ.99.99 ಅಂಕ ಪಡೆದು ಓಬಿಸಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 1475 ಅಂಕ ಪಡೆದು ಉತ್ತೀರ್ಣನಾಗಿದ್ದ.
ಎಂಬಿಬಿಎಸ್ ತರಗತಿಗೆ ಸೇರಲು ಅನುರಾಗ್ ಉತ್ತರ ಪ್ರದೇಶದ ಗೋರಖ್ ಪುರಕ್ಕೆ ತೆರಳಬೇಕಿತ್ತು. ಗೋರಖ್ ಪುರಕ್ಕೆ ದಾಖಲಾತಿಗೆ ಹೋಗುವ ಹಿಂದಿನ ಮನೆಯ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



