ಆರಂಭಿಕ ಜಾನ್ ಕ್ಯಾಂಪ್ ಬೆಲ್ ಮತ್ತು ಶಾಯಿ ಹೋಪ್ ಅವರ ಶತಕಗಳ ನೆರವಿನಿಂದ ಹೋರಾಟ ನಡೆಸಿದ ವೆಸ್ಟ್ ಇಂಡೀಸ್ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲಿನಿಂದ ಪಾರಾಗಿದ್ದು, ಭಾರತಕ್ಕೆ 121 ರನ್ ಗುರಿ ಒಡ್ಡಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್ ನಲ್ಲಿ 270 ರನ್ ಹಿನ್ನಡೆ ಅನುಭವಿಸಿದ್ದ ವೆಸ್ಟ್ ಇಂಡೀಸ್ ತಂಡ ಮೂರನೇ ದಿನವಾದ ಸೋಮವಾರ ಚಹಾ ವಿರಾಮದ ನಂತರ ಎರಡನೇ ಇನಿಂಗ್ಸ್ ನಲ್ಲಿ 390 ರನ್ ಗಳ ಬೃಹತ್ ಮೊತ್ತ ಪೇರಿಸಿತು.



