Monday, June 1, 2026
Google search engine
Homeಕಾನೂನುವೀರೇಂದ್ರ ಹೆಗ್ಗಡೆ ಮಾನಹಾನಿ ವೀಡಿಯೊ ಡಿಲಿಟ್ ಮಾಡಲು ಸಮೀರ್ ಗೆ ಕೋರ್ಟ್ ಆದೇಶ

ವೀರೇಂದ್ರ ಹೆಗ್ಗಡೆ ಮಾನಹಾನಿ ವೀಡಿಯೊ ಡಿಲಿಟ್ ಮಾಡಲು ಸಮೀರ್ ಗೆ ಕೋರ್ಟ್ ಆದೇಶ

ಬೆಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಮಾನಹಾನಿ ವಿಡಿಯೋ ಮಿಲಿಯನ್ ವೀವ್ಸ್ ಪಡೆದಿದ್ದರೆ ಡಿಲಿಟ್ ಮಾಡುವಂತೆ ಯೂಟ್ಯೂಬರ್ ಸಮೀರ್ ಎಂ.ಡಿ ಗೆ ಕೋರ್ಟ್ ಆದೇಶಿಸಿದೆ.

ಮೂರು ದಿನದೊಳಗೆ ವಿಡಿಯೋ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ ನೀಡಿದೆ ಯೂಟ್ಯೂಬರ್ ಸಮೀರ್, ಅನಂತ್ ಅಂಚನ್ ಮತ್ತು ಶ್ರೀನಾಥ ಶೆಟ್ಟಿ ಸೇರಿ ಗಿರೀಶ್ ಮಟ್ಟಣ್ಣನವರಿಗೆ ನಗರದ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.

ಶಾಶ್ವತ ನಿರ್ಬಂಧ ಹೆರಬೇಕು ಎಂದು ಹರ್ಷೇಂದ್ರ ಕುಮಾರ್ ಎನ್ನುವವರು ಮೂಲಧೆ ದಾವೆ ಹೂಡಿದ್ದರು. ಇದೀಗ ಕೋರ್ಟ್ ವಿಡಿಯೋ ಡಿಲೀಟ್ ಮಾಡುವಂತೆ ಎಂ ಡಿ ಸಮೀರ್ ಗೆ ಸೂಚನೆ ನೀಡಿದೆ.

ಜಯಂತ್ ವಿರುದ್ಧ ಎಫ್‌ಐಆರ್:

ಧರ್ಮಸ್ಥಳ ವಿರೋಧಿ ಹೋರಾಟಗಾರ ಮಹೇಶ್ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧ ಯೂಟ್ಯೂಬ್‌ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಅಡಿ ಟಿ. ಜಯಂತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಎಫ್ ಐಆರ್  ದಾಖಲಿಸಿಕೊಂಡಿದ್ದಾರೆ.

ಅಪೂರ್ಣ ಮಾಹಿತಿ:

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ, ಇದೊಂದು ಷಡ್ಯಂತ್ರ ಎಂದು ಟಿ.ಜಯಂತ ಒಂದು ಯುಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ. ಗಡಿಪಾರಿನ ಕುರಿತು ಜಿಲ್ಲಾಡಳಿತದ ಆದೇಶದ ಸತ್ಯತೆ ತಿಳಿದಿದ್ದರೂ ಕೂಡ ಜಯಂತ್ ಅಪೂರ್ಣವಾದ ಮಾಹಿತಿ ನೀಡಿದ್ದಾನೆ. ಇದೊಂದು ಷಡ್ಯಂತ್ರ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪದ ಮೇರೆಗೆ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್‌ಎಸ್ 353 (1) (ಬಿ) ಅಡಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments