Monday, August 10, 2026
Google search engine
Homeದೇಶಜೆನ್ ಜಿ ಎಫೆಕ್ಟ್: 32 ಪರಿವಾರ ಸಂಘಟನೆಗಳ ಸಭೆ ಕರೆದ ಆರೆಸ್ಸೆಸ್

ಜೆನ್ ಜಿ ಎಫೆಕ್ಟ್: 32 ಪರಿವಾರ ಸಂಘಟನೆಗಳ ಸಭೆ ಕರೆದ ಆರೆಸ್ಸೆಸ್

ನವದೆಹಲಿ: ಜೆನ್-ಝೀ ಹಾಗೂ ಇನ್ನಿತರ ಸಮಕಾಲೀನ ವಿಷಯಗಳ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) 32 ಪರಿವಾರ ಸಂಘಟನೆಗಳು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮುಂದಿನ ವಾರ ನಡೆಯಲಿರುವ ವಾರ್ಷಿಕ ಸಮನ್ವಯ ಸಭೆಯಲ್ಲಿ ಚರ್ಚಿಸಲಿವೆ. ಬಿಜೆಪಿಯೂ ಭಾಗಿಯಾಗಲಿದೆ.

ವಿಶಾಖಪಟ್ಟಣದ ಗುಡಿಲೊವಾದಲ್ಲಿ ಆಗಸ್ಟ್ 19ರಿಂದ ಮೂರು ದಿನಗಳ ಸಭೆ ನಡೆಯಲಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ಸಭೆ ನಡೆಯಲಿದೆ.

‘ಸಭೆಯಲ್ಲಿ ಎಲ್ಲಾ 32 ಪರಿವಾರ ಸಂಘಟನೆಗಳು ತಮ್ಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಿವೆ. ಅಲ್ಲದೆ ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನೂ ತಿಳಿಸಲಿವೆ’ ಎಂದು ಆರ್‌ಎಸ್‌ಎಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಸುನಿಲ್ ಅಂಬೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಸ್ಪರ ಸಮನ್ವಯ ಹಾಗೂ ಸಹಕಾರ, ಸಾಮಾಜಿಕ ಕಲ್ಯಾಣ ಹಾಗೂ ನೀತಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments