Thursday, May 14, 2026
Google search engine
Homeರಾಜ್ಯಗ್ರಾಹಕರಿಗೆ ಬಿಗ್ ಶಾಕ್: ಇಂದಿನಿಂದಲೇ ನಂದಿನಿ ತುಪ್ಪ ಲೀಟರ್ ಗೆ 90 ರೂ.ಏರಿಕೆ!

ಗ್ರಾಹಕರಿಗೆ ಬಿಗ್ ಶಾಕ್: ಇಂದಿನಿಂದಲೇ ನಂದಿನಿ ತುಪ್ಪ ಲೀಟರ್ ಗೆ 90 ರೂ.ಏರಿಕೆ!

ಜಿಎಸ್ ಟಿ ದರ ಇಳಿಕೆಯಿಂದ ಹಾಲಿನ ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕೆಎಂಎಫ್ ಇದೀಗ ದಿಢೀರನೆ ನಂದಿನಿ ತುಪ್ಪದ ದರ ಲೀಟರ್ ಗೆ 90 ರೂ. ಏರಿಕೆ ಮಾಡಿ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.

ಬೆಂಗಳೂರಿನಲ್ಲಿ ಬಮೂಲ್ ಅಧ್ಯಕ್ಷ ನಿರ್ದೇಶಕ ಡಿಕೆ ಸುರೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದ್ದು, ಲೀಟರ್ ಗೆ 90 ರೂ. ಏರಿಕೆಯಿಂದಾಗಿ ಒಟ್ಟಾರೆ ನಂದಿನಿ ತುಪ್ಪದ ದರ 700 ರೂ. ಆಗಲಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಒಂದು ಲೀಟರ್ ತುಪ್ಪವನ್ನು 610 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಗೂ ಮುಂಚೆ ಈ ದರ 650 ರೂಪಾಯಿಗೆ ಇಳಿದಿತ್ತು, ಸುಧಾರಣೆಯಲ್ಲಿ 40 ರೂಪಾಯಿಗಳ ಇಳಿಕೆ ಮಾಡಲಾಗಿತ್ತು. ಆದರೆ ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತುಪ್ಪದ ದರ ಏರಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದರ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ತುಪ್ಪದ ದರ ಕಡಿಮೆ ಇದೆ. ಅಲ್ಲದೇ ಹಾಲಿನ ದರ ಏರಿಕೆ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಹಾಲಿನ ದರ ಏರಿಕೆಯ ಸುಳಿವನ್ನು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments