ನಾಯಕ ರೋಹಿತ್ ಶರ್ಮ ಅರ್ಧಶತಕ ಹಾಗೂ ಬೌಲರ್ ಗಳ ಸಹಾಯದಿಂದ ಭಾರತ ತಂಡ 8 ವಿಕೆಟ್ ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ.
ನ್ಯೂಯಾರ್ಕ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡ 16 ಓವರ್ ಗಳಲ್ಲಿ 96 ರನ್ ಗೆ ಆಲೌಟ್ ಮಾಡಿದ ಭಾರತ ತಂಡ ಸುಲಭ ಗುರಿಯನ್ನು 12.2 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸುಲಭ ಜಯ ದಾಖಲಿಸಿತು.
ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಕೇವಲ 1 ರನ್ ಬಾರಿ ಔಟಾಗಿದ್ದರಿಂದ ಭಾರತ ಒತ್ತಡಕ್ಕೆ ಒಳಗಾಯಿತು. ಆದರೆ ಎರಡನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ರಿಷಭ್ ಪಂತ್ ಮತ್ತು ನಾಯಕ ರೋಹಿತ್ ಶರ್ಮ 2ನೇ ವಿಕೆಟ್ ಗೆ 54 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು.
ರೋಹಿತ್ ಶರ್ಮ ಭುಜಕ್ಕೆ ಚೆಂಡು ಬಡಿದು ಗಾಯಗೊಂಡು ನಿವೃತ್ತಿ ಆಗುವ ಮುನ್ನ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 52 ರನ್ ಗಳಿಸಿದರು. ರಿಷಭ್ ಪಂತ್ 26 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 36 ರನ್ ಬಾರಿಸಿದರು. ಸೂರ್ಯಕುಮಾರ್ (2) ವಿಫಲರಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಐರ್ಲೆಂಡ್ ತಂಡ ಜಸ್ ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮಾರಕ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿಯಿತು. ಬುಮ್ರಾ 6 ರನ್ ನೀಡಿ 2 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ಮತ್ತು ಅರ್ಷದೀಪ್ ಸಿಂಗ್ 2 ವಿಕೆಟ್ ಗಳಿಸಿದರು. ಐರ್ಲೆಂಡ್ ಪರ ಗೆರಾಥ್ ಡೆಲಾನಿ 25 ರನ್ ಬಾರಿಸಿ ಏಕಾಂಗಿ ಹೋರಾಟ ನಡೆಸಿದರೂ ತಂಡದ ಮೊತ್ತ 100ರ ಗಡಿ ದಾಟಲಿಲ್ಲ.