ದೆಹಲಿಯ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಪ್ರಕರಣದ ಹಿಂದೆ ಅನುಮಾನ ಮೂಡಿಸಿದ್ದ ಎಕೊ ಸ್ಫೋಟ್ಸ್ ಎಸ್ ಯುವಿ ಕಾರನ್ನು ಸುದೀರ್ಘ ಹುಡುಕಾಟದ ನಂತರ ಪತ್ತೆ ಹಚ್ಚಲಾಗಿದೆ.
ಕೆಂಪುಕೋಟೆಯಲ್ಲಿ ಸ್ಫೋಟಗೊಂಡ ಪ್ರಕರಣದ ಹಿಂದೆ ಸಾಕಷ್ಟು ಅನುಮಾನ ಮೂಡಿಸಿದ್ದ ಹರಿಯಾಣದ ಖಂಡವಲ್ಲಿ ಗ್ರಾಮದ ಫಾರ್ಮ್ಸ್ ಹೌಸ್ ನಲ್ಲಿ ಕಾರು (DL10CK0458) ಪತ್ತೆಯಾಗಿದೆ.
ಜಮ್ಮು ಕಾಶ್ಮೀರದ ಪೆಹಲ್ಗಾಮ್ ದಾಳಿಯಲ್ಲಿ 26 ಪ್ರವಾಸಿಗರನ್ನು ಉಗ್ರರು ಹತ್ಯೆಗೈದ ನಂತರ ದೇಶದಲ್ಲಿ ನಡೆದ ಅತೀ ದೊಡ್ಡ ಭಯೋತ್ಪಾದಕ ದಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಉಗ್ರರ ಪತ್ತೆಗೆ ದೊಡ್ಡ ಬೇಟೆ ಆರಂಭಿಸಲಾಗಿದೆ.
ದೆಹಲಿಯಲ್ಲಿ ಸ್ಫೋಟಗೊಂಡ ಪ್ರಮುಖ ಆರೋಪಿ ಹೊಂದಿದ್ದ ಈ ಕೆಂಪು ಎಸ್ ಯುವಿ ಕಾರು ಸ್ಫೋಟಗೊಂಡ ಕಾರಿನ ಬಳಿಯೇ ಇತ್ತು. ಈ ಹಿನ್ನೆಲೆಯಲ್ಲಿ ಈ ಕಾರಿನ ಮೇಲೆ ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದು, ಸುದೀರ್ಘ ಹುಡುಕಾಟದ ನಂತರ ಹರಿಯಾಣದ ಫಾರ್ಮ್ ಹೌಸ್ ನಲ್ಲಿ ಪತ್ತೆಯಾಗಿದೆ.



