Thursday, May 14, 2026
Google search engine
Homeಮನರಂಜನೆಮೊದಲ ದಿನದ ಗಳಿಕೆಯಲ್ಲಿ 45 ಹಿಂದಿಕ್ಕಿದ ಮಾರ್ಕ್: ಡಿಸೆಂಬರ್ ನಲ್ಲಿ `ಡೆವಿಲ್’ ಮೇಲುಗೈ

ಮೊದಲ ದಿನದ ಗಳಿಕೆಯಲ್ಲಿ 45 ಹಿಂದಿಕ್ಕಿದ ಮಾರ್ಕ್: ಡಿಸೆಂಬರ್ ನಲ್ಲಿ `ಡೆವಿಲ್’ ಮೇಲುಗೈ

ಕ್ರಿಸ್ ಮಸ್ ಸಂಭ್ರಮದ ವೇಳೆ ಒಂದೇ ದಿನ 4 ಪ್ರಮುಖ ಚಿತ್ರಗಳು ಬಿಡುಗಡೆ ಆಗಿ ಭಾರೀ ಪೈಪೋಟಿಯಲ್ಲಿ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಮೊದಲ ದಿನದ ಗಳಿಕೆಯಲ್ಲಿ ಮೊದಲ ಸ್ಥಾನ ಆಕ್ರಮಿಸಿಕೊಳ್ಳುವ ಮೂಲಕ 45 ಚಿತ್ರವನ್ನು ಹಿಂದಿಕ್ಕಿದೆ.

ಮಾರ್ಕ್, 45 ಮತ್ತು ವೃಷಭ ಚಿತ್ರಗಳು ಬಿಡುಗಡೆ ಆಗಿದ್ದು, ಮೋಹನ್ ಲಾಲ್ ನಟಿಸಿ, ನಂದಕಿಶೋರ್ ನಿರ್ದೇಶನದ ವೃಷಭ ಚಿತ್ರ ಮೊದಲ ದಿನವೇ ನೆಲಕಚ್ಚಿದರೆ, ಸುದೀಪ್ ಅಭಿನಯದ ಮಾರ್ಕ್ ಚಿತ್ರ ಮೊದಲ ದಿನದ ಪರೀಕ್ಷೆಯಲ್ಲಿ ಗೆದ್ದು ಬಂದಿದೆ. ಮತ್ತೊಂದೆಡೆ ಉಪೇಂದ್ರ, ಶಿವರಾಜ್ ಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಅಭಿನಯಿಸಿದ 45 ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದಿದ್ದರೂ ಗಳಿಕೆಯಲ್ಲಿ ಹಿಂದೆ ಬಿದ್ದಿದೆ.

ಸುಮಾರು 150 ಥಿಯೇಟರ್ ಗಳಲ್ಲಿ ಬಿಡುಗಡೆ ಆದ ಮಾರ್ಕ್ ಚಿತ್ರ ಮೊದಲ ದಿನ 6.2 ಕೋಟಿ ರೂ. ಸಂಗ್ರಹಿಸಿ ಮೇಲುಗೈ ಸಾಧಿಸಿದರೆ, 45 ಚಿತ್ರ 250 ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿದ್ದು, 4.2 ಕೋಟಿ ರೂ. ಗಳಿಸಿ ಎರಡನೇ ಸ್ಥಾನ ಪಡೆದಿದೆ.

ಮಾರ್ಕ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಇದ್ದರೂ ಅಭಿಮಾನಿಗಳ ಆರ್ಭಟದಿಂದ ಮೊದಲ ದಿನ ಗಳಿಕೆಯಲ್ಲಿ ಮೇಲುಗೈ ಸಾಧಿಸಿದೆ. ಮತ್ತೊಂದೆಡೆ ಭಾರೀ ಕುತೂಹಲ ಮೂಡಿಸಿ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಪಡೆದ 45 ಹಿಂದೆ ಬಿದ್ದರೂ ಮುಂದಿನ ದಿನಗಳಲ್ಲಿ ಅದರಲ್ಲೂ ವಾರಾಂತ್ಯದಲ್ಲಿ ಈ ಎರಡೂ ಚಿತ್ರಗಳ ಗಳಿಕೆ ಮೇಲೆ ಚಿತ್ರದ ಯಶಸ್ಸು ನಿಂತಿದೆ.

ಆದರೆ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆದ ಚಿತ್ರಗಳಿಗೆ ಹೋಲಿಸಿದರೆ ಡೆವಿಲ್ ಚಿತ್ರ ಮೊದಲ ದಿನವೇ 10.8 ಕೋಟಿ ರೂ. ಗಳಿಸಿ ಎಲ್ಲಾ ಚಿತ್ರಗಳನ್ನೂ ಹಿಂದಿಕ್ಕಿದೆ. ಆದರೆ ಈ ಚಿತ್ರಕ್ಕೆ ನಂತರದ ದಿನಗಳಲ್ಲಿ ನಿರೀಕ್ಷಿತ ಫಲಿತಾಂಶ ಬಾರದೇ ಕುಂಟುತ್ತಾ ಸಾಗಿದೆ. ಆದರೆ ಡೆವಿಲ್ ಚಿತ್ರ ಮೊದಲ ಮೂರು-ನಾಲ್ಕು ದಿನಗಳ ಕಾಲ 3 ಕೋಟಿಯಷ್ಟು ಪ್ರತಿದಿನ ಗಳಿಕೆ ಮಾಡಿತ್ತು.

ಡಿಸೆಂಬರ್ 11ರಂದು ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿದ ಪ್ರಕಾಶ್​ ವೀರ್​ ಸಾರಥ್ಯದ ಸಿನಿಮಾ, ತನ್ನ ಮೊದಲ ದಿನ ಬರೋಬ್ಬರಿ 10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಚಿತ್ರ ತನ್ನ 15ನೇ ದಿನ 0.24 ಕೋಟಿ ರೂ. ಕಲೆಕ್ಷನ್​ ಮಾಡಿದ್ದು, ಪ್ರದರ್ಶನ ಮುಂದುವರಿಸಿದೆ.

ಚಿತ್ರಮಂದಿರಗಳಲ್ಲಿ 45, ಮಾರ್ಕ್​ ಮತ್ತು ವೃಷಭ ಸೇರಿ ಕೆಲ ಚಿತ್ರಗಳಿದ್ದು, ಕಠಿಣ ಬಾಕ್ಸ್​ ಆಫೀಸ್ ಪೈಪೋಟಿ ಏರ್ಪಟ್ಟಿದೆ. ಗುರುವಾರದ ಗಳಿಕೆಯೂ ಸೇರಿದಂತೆ ಚಿತ್ರ ತನ್ನ 15 ದಿನಗಳಲ್ಲಿ ಒಟ್ಟು ಭಾರತದಲ್ಲಿ 28.76 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. 33.83 ಕೋಟಿ ರೂಪಾಯಿ ಗ್ರಾಸ್​ ಕಲೆಕ್ಷನ್​ ಆಗಿದೆ. ​

ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್​ ಕಾಂಬಿನೇಶನ್​ನಲ್ಲಿ ಮೂಡಿಬಂದ 2025ರ ಬಹುನಿರೀಕ್ಷಿತ ಚಿತ್ರ ಮಾರ್ಕ್ ಡಿಸೆಂಬರ್​ 25ರಂದು ತೆರೆಕಂಡು ತನ್ನ ಮೊದಲ ದಿನ 6.25 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಅಜಯ್ ಮಾರ್ಕಂಡೆ ಹೆಸರಿನ​ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ಉಳಿದಂತೆ ಚಿತ್ರದಲ್ಲಿ ದೀಪ್ಶಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ, ಯೋಗಿ ಬಾಬು ಸೇರಿ ಕೆಲವರು ಬಣ್ಣ ಹಚ್ಚಿದ್ದಾರೆ.

ಶಿವರಾಜ್​ಕುಮಾರ್​, ಉಪೇಂದ್ರ, ರಾಜ್​​ ಬಿ ಶೆಟ್ಟಿ ತೆರೆಹಂಚಿಕೊಂಡಿರುವ 45 ಸಿನಿಮಾ ಕೂಡಾ ತೆರೆಕಂಡಿತು. ಬಹುತೇಕ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ ಈ ಸಿನಿಮಾ ತನ್ನ ಮೊದಲ ದಿನ 4.25 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಿಸಿರುವ ಚೊಚ್ಚಲ ಚಿತ್ರವನ್ನು ಸೂರಜ್ ಪ್ರೊಡಕ್ಷನ್ ಲಾಂಛನದಲ್ಲಿ ರಮೇಶ್ ರೆಡ್ಡಿ ಬಿಗ್​ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಕಥೆ, ನಿರ್ದೇಶನದ ಜೊತೆಗೆ ಸಂಗೀತ ನೀಡಿದ್ದಾರೆ. ಸತ್ಯ ಹೆಗ್ಗಡೆ ಛಾಯಾಗ್ರಹಣವಿದ್ದು, ಪ್ರಮೋದ್ ಶೆಟ್ಟಿ, ಸುಧಾರಾಣಿ ತಾರಾಬಳಗದಲ್ಲಿದ್ದಾರೆ. 4.25 ಕೋಟಿ ರೂಪಾಯಿಯ ವ್ಯವಹಾರದೊಂದಿಗೆ ಮೊದಲ ದಿನದ ಗಳಿಕೆಯಲ್ಲಿ ಮಲ್ಟಿಸ್ಟಾರರ್ ಸಿನಿಮಾ ಮೂರನೇ ಸ್ಥಾನದಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments