ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಅವರ ಮಾವ, ನಿರ್ಮಾಪಕ ವಾಶು ಭಾಗನಾನಿ ಮತ್ತು ಪನೋರಮಾ ಸ್ಟೂಡಿಯೋ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮುಂಬೈ ಆದಾಯ ತೆರಿಗೆ ಇಲಾಖೆ ಘಟಕ ಬಾಲಿವುಡ್ ನಟಿಗೆ ಸೇರಿದ ಅಕ್ರಮ ಹಣದ ವಹಿವಾಟು ಹಾಗೂ ಬಂಡವಾಳ ಹೂಡಿಕೆ ಆರೋಪಗಳ ಹಿನ್ನೆಲೆಯಲ್ಲಿ 19 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಆದಾಯ ತೆರಿಗೆ ಇಲಾಖೆಯ ಹಲವು ತಂಡಗಳು ದಾಖಲೆಗಳ ಪರಿಶೀಲನೆ ನಡೆಸಿದ್ದು, ವಿದೇಶೀ ಹಣದ ವಹಿವಾಟುಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಕಳೆದ ಡಿಸೆಂಬರ್ ನಲ್ಲಿ ಮುಂಬೈ ಪೊಲೀಸರು ರಾಕುಲ್ ಪ್ರೀತ್ ಸಿಂಗ್ ಅವರ ಸೋದರ ಅಮನ್ ಪ್ರೀತ್ ಸಿಂಗ್ ಡ್ರಗ್ ಪ್ರಕರಣದಲ್ಲಿ ಬಂಧಿಸಿತ್ತು.



