Friday, August 21, 2026
Google search engine
Homeವಿದೇಶಬಾಂಗ್ಲಾದಲ್ಲಿ ಹಿಂದೂ ವಿಧವೆ ಮೇಲೆ ಅತ್ಯಾಚಾರ: ಮರಕ್ಕೆ ಕಟ್ಟಿಹಾಕಿ ತಲೆಕೂದಲಿಗೆ ಕತ್ತರಿ!

ಬಾಂಗ್ಲಾದಲ್ಲಿ ಹಿಂದೂ ವಿಧವೆ ಮೇಲೆ ಅತ್ಯಾಚಾರ: ಮರಕ್ಕೆ ಕಟ್ಟಿಹಾಕಿ ತಲೆಕೂದಲಿಗೆ ಕತ್ತರಿ!

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದ್ದು, ಇಬ್ಬರು ವ್ಯಕ್ತಿಗಳು 40 ವರ್ಷದ ಹಿಂದೂ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಮರಕ್ಕೆ ಕಟ್ಟಿಹಾಕಿ ತಲೆಗೂದಲು ಕತ್ತರಿಸಿ ವಿಕೃತಿ ಮೆರೆದಿದ್ದಾರೆ.

ಜೆನಿಹಾದಾಹ್ ವಿಭಾಗೀಯ ಜಿಲ್ಲೆಯಾದ ಕಾಲಿಂಗಜ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳ ಪೈಕಿ ಒಬ್ಬನಿಂದ ಮಹಿಳೆ ಕಾಲಿಂಗಜ್ ಮುನ್ಸಿಪಾಲಿಟಿಯಲ್ಲಿ ಸೋದರನಿಂದ 20 ಲಕ್ಷ ಟಾಕಾ (ಬಾಂಗ್ಲಾ ರೂಪಾಯಿ) ನೀಡಿ ಮೂರಂತಸ್ತಿನ ಕಟ್ಟಡವನ್ನು ಎರಡು ವರ್ಷಗಳ ಹಿಂದೆ ಖರೀದಿಸಿದ್ದರು.  ಮನೆ ಖರೀದಿಸಿದಾಗಿನಿಂದ ನನಗೆ ಕಿರುಕುಳ ನೀಡಲು ಆರಂಭಿಸಿದ್ದರು.

ಶನಿವಾರ ಸಂಜೆ ವಿಧವೆಯ ಸಂಬಂಧಿಕರು ಮನೆಗೆ ಬಂಧು ಭೇಟಿ ಮಾಡಿದಾಗ ಇಬ್ಬರು ಸೋದರರು ಮನೆಗೆ ನುಗ್ಗಿ ದಾಂಧಲೆ ಮಾಡಿದ್ದು, ಹೆಚ್ಚುವರಿ 50 ಸಾವಿರ ಟಾಕಾ ನೀಡುವಂತೆ ಆಗ್ರಹಿಸಿದರು. ಹೆಚ್ಚುವರಿ ಹಣ ನೀಡಲು ಮಹಿಳೆ ನಿರಾಕರಿಸಿದಾಗ ಮನೆಗೆ ಬಂದಿದ್ದ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡು ನೆರವು ಕೋರಿದಾಗ ಆಕೆಯನ್ನು ದರದರನೆ ಎಳೆದುಕೊಂಡು ಹೋದ ಇಬ್ಬರು ಮರಕ್ಕೆ ಕಟ್ಟಿ ಹಾಕಿ ಆಕೆಯ ಕೂದಲು ಕತ್ತರಿಸಿದ್ದೂ ಅಲ್ಲದೇ ಅತ್ಯಾಚಾರ ಎಸಗಿದ್ದಾರೆ.

ಇಷ್ಟಕ್ಕೆ ಅವರ ಕ್ರೌರ್ಯ ನಿಲ್ಲದೇ ಇಡೀ ಘಟನೆಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಹಿಂಸೆ ತಾಳಲಾರದೇ ಮಹಿಳೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆರಂಭದಲ್ಲಿ ಆಕೆಯ ಘಟನೆಯ ಮಾಹಿತಿ ನೀಡಲು ನಿರಾಕರಿಸಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಸತ್ಯ ತಿಳಿದ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಘಟನೆಯನ್ನು ವಿವರಿಸಿದ ಮಹಿಳೆ, ಶಾಹಿನ್ ಮತ್ತು ಹುಸೇನ್ ಎಂಬ ಇಬ್ಬರ ವಿರುದ್ಧ ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments